ಹಾವೇರಿ: ಕಾಂಗ್ರೆಸ್ ಅರ್ಜಿಗಳನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಪಕ್ಷ ಸೇರುವಂತೆ "ಹೋಲ್ ಸೇಲ್ ಟೆಂಡರ್" ಕರೆದಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಅವರ ಕನಸು ಈಡೇರುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಕ್ಷ ಬಿಟ್ಟು ಹೋದವರಿಗೆ ಡಿ.ಕೆ. ಶಿವಕುಮಾರ್ ಮಣೆ ಹಾಕುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಮಾಧ್ಯಮದವರೊಂದಿಗೆ ಈ ರೀತಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನವರಿಗೆ "ಔಟ್ ಆಫ್ ಸೈಟ್" ಆಗಿದೆ. ಜನರು ಕಾಂಗ್ರೆಸ್ ಅನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತ ಪ್ರಶ್ನೆಗೆ, ಅವರಷ್ಟು ನಾವು ಬುದ್ಧಿವಂತರಲ್ಲ, ಗೂಡಾರ್ಥ ಮಾತು ನನಗೆ ಅರ್ಥವಾಗಲ್ಲ. ಅಪ್ಪ ಹೊತ್ತ ಅಂಬಾರಿಯನ್ನು ಶಕ್ತಿ ಇದ್ದರೆ ಮಗನೂ ಹೊರುತ್ತಾನೆ ಎಂದು ಹೇಳುವ ಮೂಲಕ ಟಾಂಗ್ ನೀಡಿದರು. ಬಿ.ಎಸ್.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರಿಗೂ ರಾಜ್ಯಭಾರ ಮಾಡುವ ಶಕ್ತಿ ಎಂದು ಪರೋಕ್ಷವಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.