ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ರಾಜಕೀಯ ನಂಬರ್‌ 1 ವೈರಿ ಬಿಜೆಪಿ ಮತ್ತು ಆರ್‌ಎಸ್‌ಎಸ್'

Last Updated 7 ಡಿಸೆಂಬರ್ 2020, 19:17 IST
ಅಕ್ಷರ ಗಾತ್ರ

ಬೆಂಗಳೂರು:‘ನನ್ನ ರಾಜಕೀಯನಂಬರ್‌ 1 ವೈರಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌. ಈ ಬಗ್ಗೆ ನನಗೆ ಇನ್ನೂರು ಪ್ರತಿಶತ ಸ್ಪಷ್ಟತೆ ಇದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪ್ರವಾಹದ ಕುರಿತ ಚರ್ಚೆ ವಿಧಾನಸಭೆಯಲ್ಲಿ ತಿಳಿ ಹಾಸ್ಯದ ಧಾಟಿಗೆ ಹೊರಳಿದಾಗ, ‘ಆಪರೇಷನ್‌ ಕಮಲ’ದ ವಿಷಯವನ್ನು ಅವರು ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ನಮ್ಮ ಸರ್ಕಾರ ಬಂದಿದ್ದಕ್ಕಾಗಿ ನಿಮ್ಮ ಉಪಕಾರ ಸ್ಮರಣೆ ಮಾಡುತ್ತೇವೆ’ ಎಂದು ಹೇಳಿದರು.

‘ನಿಮ್ಮ ನೆರವು ಇಲ್ಲದೆ ನಮ್ಮ ಸರ್ಕಾರ ಹೇಗೆ ಬರುತ್ತಿತ್ತು’ ಎಂದು ಮಾಧುಸ್ವಾಮಿ ಕಾಲೆಳೆದರು. ‘ನಾನು ಏನು ಮಾಡಿದ್ದೇನೆ. ಸೈದ್ಧಾಂತಿಕವಾಗಿ ಬಿಜೆಪಿ ನಂ. 1 ರಾಜಕೀಯ ವಿರೋಧಿ. ಹೀಗಾಗಿ ಸಹಾಯ ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತದೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಹಾಗಿದ್ದರೆ ಜೆಡಿಎಸ್‌ ಏನು’ ಎಂದು ಸಚಿವ ಆರ್‌.ಅಶೋಕ ಪ್ರಶ್ನಿಸಿದರು, ‘ಅವರು(ಜೆಡಿಎಸ್‌) ಈಗ ನಿಮಗೆ ಹತ್ತಿರವಾಗಿದ್ದಾರೆ’ ಎಂದರು.

ರಾಜ್ಯದಲ್ಲಿ ಶೇ 13ರಷ್ಟು ಮುಸ್ಲಿಮರು ಇದ್ದಾರೆ. ಆದರೆ ಒಬ್ಬ ಮುಸ್ಲಿಂಮಂತ್ರಿಯೂ ನಿಮ್ಮ ಸರ್ಕಾರದಲ್ಲಿ ಇಲ್ಲ ಎಂದು ಛೇಡಿಸಿದರು.

ಇತ್ತೀಚೆಗೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ‘ಬೆಳಗಾವಿ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್‌ ಕೊಡುವುದಿಲ್ಲ’ ಎಂದು ಹೇಳಿಕೆ ನೀಡಿ ದ್ದನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಅದಕ್ಕೆ ಸಮಜಾಯಿಷಿ ನೀಡಿದ ಮಾಧುಸ್ವಾಮಿ, ‘ಮುಸ್ಲಿಮರಿಗೆ ಟಿಕೆಟ್‌ ಕೊಡುವುದಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಈಶ್ವರಪ್ಪ ಕೊಡುವುದಿಲ್ಲ ಎಂದರು. ಆದರೆ, ಬೇರೆಯದೇ ರೀತಿಯಲ್ಲಿವ್ಯಾಖ್ಯಾನಿಸಲಾಗಿದೆ’ ಎಂದರು.

ಮನುಷ್ಯ ಮನುಷ್ಯನನ್ನು ಪ್ರೀತಿಸಿದರೆ ಮನುಷ್ಯತ್ವ ಎನಿಸುತ್ತದೆ. ಇಲ್ಲದಿದ್ದರೆ ಕಂದಕ ನಿರ್ಮಾಣವಾಗು ತ್ತದೆ ಎಂದು ಸಿದ್ದರಾಮಯ್ಯ ಬಿಜೆಪಿ ಸದಸ್ಯರನ್ನು ತಿವಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್‌.ಅಶೋಕ, ‘ನಮ್ಮ ಪಕ್ಷ ತುಷ್ಟೀಕರಣದಲ್ಲಿ ನಂಬಿಕೆ ಇಟ್ಟಿಲ್ಲ. ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಮೇಲೆ ನಂಬಿಕೆ ಇಟ್ಟಿದ್ದೇವೆ. ನೀವು 70 ವರ್ಷಗಳಿಂದ ಬಿಜೆಪಿ ನಿಮ್ಮನ್ನು ತಿಂದು ಹಾಕುತ್ತದೆ ಎಂದು ಹೆದರಿಸಿ ಮುಸ್ಲಿಮರನ್ನು ಮರಳು ಮಾಡಿ ಇಟ್ಟುಕೊಂಡಿದ್ದೀರಿ. ಈಗ ಪರಿಸ್ಥಿತಿ ಬದಲಾಗಿದೆ. ನಮ್ಮಲ್ಲೂ ನಿಗಮ ಮಂಡಳಿಗಳಿಗೆ ಮುಸ್ಲಿಮರನ್ನು ನೇಮಕ
ಮಾಡಿದ್ದೇವೆ ’ ಎಂದು ಹೇಳಿದರು. ‘ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬರೂ ಸಚಿವರು ಇಲ್ಲ’ ಎಂದು ಕಾಂಗ್ರೆಸ್‌ನ ಯು.ಟಿ.ಖಾದರ್‌ ಹೇಳಿದಾಗ, ‘ನೀವು ಬನ್ನಿ ನಿಮ್ಮನ್ನೇ ಮಂತ್ರಿ ಮಾಡೋಣ’ ಎಂದು ಅಶೋಕ ಚಟಾಕಿ ಹಾರಿಸಿದರು. ‘ಖಾದರ್‌ ನಿಮ್ಮ ಪಕ್ಷಕ್ಕೆ ಬರಲ್ಲ ಬಿಡ್ರಿ’ ಎಂದು ಸಿದ್ದರಾಮಯ್ಯ ಹೇಳಿದರು.

‘ಎಚ್‌ಡಿಕೆಯನ್ನು ನಿಮ್ಮ ವಕ್ತಾರರನ್ನಾಗಿ ಮಾಡಿ’

‘ಇತ್ತೀಚಿನ ದಿನಗಳಲ್ಲಿ ಎಚ್‌.ಡಿ.ಕುಮಾರ ಸ್ವಾಮಿ ನಿಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಿ ದ್ದಾರೆ’ ಎಂದು ಸಚಿವ ಆರ್‌.ಅಶೋಕ ಅವರು ಹಾಸ್ಯವಾಗಿ ಕಾಲೆಳೆದಾಗ, ‘ ಇನ್ನು ಮೇಲೆ ಅವರನ್ನೇ ನಿಮ್ಮ ವಕ್ತಾರರನ್ನಾಗಿ ಮಾಡಿಕೊಳ್ಳಿ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT