ಮಂಗಳವಾರ, ಜುಲೈ 27, 2021
22 °C

ರೈತರಿಗೆ ಬಿಜೆಪಿ ಕೊಡುವುದು ಗುಂಡೇಟು, ಲಾಠಿ ಏಟು ಮಾತ್ರ: ಕಾಂಗ್ರೆಸ್‌ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈತರಿಗೆ ಬಿಜೆಪಿ ಕೊಡುವುದು ಗುಂಡೇಟು, ಲಾಠಿ ಏಟು ಮಾತ್ರ ಎಂದು ರಾಜ್ಯ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಬುಧವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಒಂದೆಡೆ ಲಾಕ್‌ಡೌನ್ ಸಂಕಷ್ಟ. ಮತ್ತೊಂದೆಡೆ ಗೊಬ್ಬರ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯ ಬರೆಯಿಂದ ಕಂಗೆಟ್ಟ ರೈತರು ಸಂಕಷ್ಟದಲ್ಲಿಯೇ ಕೃಷಿ ಚಟುವಟಿಕೆಗಳಿಗೆ, ಬಿತ್ತನೆಗೆ ತಯಾರಾಗಿದ್ದಾರೆ. ಈಗ ಬಿತ್ತನೆ ಬೀಜ ಕೇಳಿದರೆ, ಅದನ್ನೂ ಪೂರೈಸಲು ಬಿಜೆಪಿ ಸರ್ಕಾರ ಯೋಗ್ಯತೆ ಹೊಂದಿಲ್ಲ. ಇದು ರೈತ ವಿರೋಧಿ ಸರ್ಕಾರ. ರೈತರಿಗೆ ಬಿಜೆಪಿ ಕೊಡುವುದು ಗುಂಡೇಟು, ಲಾಠಿ ಏಟು ಮಾತ್ರ' ಎಂದು ವಾಗ್ದಾಳಿ ನಡೆಸಿದೆ.

'ಮುಂಗಾರು ಆರಂಭಗೊಂಡಿದೆ. ರೈತರಿಗೆ ಸೋಯಾ, ರಾಗಿ, ಮೆಣಸು ಸೇರಿದಂತೆ ಯಾವುದೇ ಬಿತ್ತನೆ ಬೀಜ ಸಿಗುತ್ತಿಲ್ಲ. ರಸಗೊಬ್ಬರಗಳೂ ಸಿಗದೆ ಪರದಾಡುತ್ತಿದ್ದಾರೆ. ಕುರ್ಚಿ ವಿಚಾರಕ್ಕೆ ಎಲ್ಲಿದ್ದರೂ ಓಡೋಡಿ ಬರುವ ಬಿಜೆಪಿ ಸಚಿವರು, ಜನರಿಗೆ ಸಮಸ್ಯೆಗಳು ಎದುರಾದಾಗ ಮಾತ್ರ ವೈಶಂಪಾಯನ ಸರೋವರ ಸೇರುತ್ತಾರೆ. ಬೀಜ ಕೊಡದೇ ಹೇಡಿಯಂತೆ ಎಲ್ಲಿ ಅಡಗಿದ್ದೀರಿ ಬಿ.ಸಿ.ಪಾಟೀಲ್?' ಎಂದು ಕೃಷಿ ಸಚಿವರನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು