ಬುಧವಾರ, ಸೆಪ್ಟೆಂಬರ್ 22, 2021
22 °C

ಬಿಜೆಪಿ ರಾಜಕೀಯ ಪಕ್ಷವಾಗಿರದೆ, ವಿಧ್ವಂಸಕ ಸಂಘಟನೆಯಾಗಿದೆ: ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್‌ ಅವರ ಫೋನ್‌ಗಳನ್ನು ಇಸ್ರೇಲಿ ಗೂಡಾಚಾರಿಕೆ ಸಾಫ್ಟ್‌ವೇರ್‌ ಪೆಗಾಸಸ್‌ ಮೂಲಕ ಕದ್ದು ನೋಡಲಾಗುತ್ತಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯನ್ನು ವಿಧ್ವಂಸಕ ಕೃತ್ಯವೆಸಗುವ ಸಂಘಟನೆ ಎಂದು ಕಾಂಗ್ರೆಸ್‌ ಜರಿದಿದೆ.

ಬಿಜೆಪಿ ಪಕ್ಷ ಇಂತಹ ನೀಚ ಕೃತ್ಯಕ್ಕೆ ಇಳಿಯುವ ಮೂಲಕ ಅದೊಂದು ರಾಜಕೀಯ ಪಕ್ಷವಾಗಿರದೆ, ವಿಧ್ವಂಸಕ ಕೃತ್ಯವೆಸಗುವ ಸಂಘಟನೆ ಎಂದು ಸಾಬೀತು ಮಾಡಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಆಪಾದಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮತ್ತು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತಿತರ ಪ್ರಮುಖ ರಾಜಕೀಯ ನಾಯಕರ ದೂರವಾಣಿ ಸಂಖ್ಯೆಗಳನ್ನು ಪೆಗಾಸಸ್‌ನಲ್ಲಿ ಗೂಢಚರ್ಯೆ ನಡೆಸಲು ಆಯ್ಕೆ ಮಾಡಲಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿರುವುದಾಗಿ ದಿ ವೈರ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು