ಸೋಮವಾರ, ಜುಲೈ 4, 2022
24 °C

ವಿಧಾನಸಭೆಯಲ್ಲೂ ಬಿಜೆಪಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವುದಕ್ಕೆ ಗುರುವಾರ ವಿಧಾನಸಭೆಯಲ್ಲೂ ಸಂಭ್ರಮಿಸಿದ ಆಡಳಿತ ಪಕ್ಷದ ಸದಸ್ಯರು, ‘ಜೈ ಶ್ರೀರಾಮ್‌’ ಘೋಷಣೆಯೊಂದಿಗೆ ಕಾಂಗ್ರೆಸ್‌ ಸದಸ್ಯರನ್ನು ಕಿಚಾಯಿಸಿದರು.

ಸದನದ ಕಲಾಪ ಆರಂಭವಾಗುವ ಸಮಯದಲ್ಲೇ ಬಿಜೆಪಿ ಶಾಸಕರು, ಸಚಿವರು ಸಂಭ್ರಮದಲ್ಲಿ ಮುಳುಗಿದ್ದರು. ಆಗ, ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ಮಾತನಾಡಲು ಎದ್ದುನಿಂತರು, ‘ಕಾಂಗ್ರೆಸ್‌ ಕತೆ ಮುಗಿಯಿತು ಅಲ್ವಾ’ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ‘ಜೈ ಶ್ರೀರಾಮ್‌’ ಎಂಬ ಘೋಷಣೆಯನ್ನೂ ಮೊಳಗಿಸಿದರು.

ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ‘ಈಶ್ವರಪ್ಪ ಅಂತೂ ಮುಖ್ಯಮಂತ್ರಿ ಆಗುವುದಿಲ್ಲ. ಆದರೂ, ಯಾಕೆ ಇಷ್ಟು ಮಾತನಾಡುತ್ತಾರೊ?’ ಎಂದು ಕೇಳಿದರು. ಬಿಜೆಪಿಯವರು, ‘ಜೈ ಶ್ರೀರಾಮ್‌’ ಎಂದರೆ ಕಾಂಗ್ರೆಸ್‌ನವರು, ‘ಜೈ ಹನುಮಾನ್‌’ ಎಂದು ಘೋಷಣೆ ಹಾಕಿದರು.

‘ಅಲ್ಲೆಲ್ಲ ಸೂತಕ. ಇಲ್ಲಿಯೂ ಸೂತಕವಾ’ ಎಂದು ಈಶ್ವರಪ್ಪ ಕೆಣಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು