ಬೆಂಗಳೂರು: ವಿಶ್ವ ಕುಂಚಿಟಿಗ ಯುವ ಶಕ್ತಿ ಸಂಘಟನೆಯು ಮೊಬೈಲ್ ಆ್ಯಪ್ ಮೂಲಕ ಕುಂಚಿಟಿಗರ ಗಣತಿ ಮಾಡಲು ಮುಂದಾಗಿದೆ.
‘ವಿಶ್ವ ಕುಂಚಿಟಿಗ ಸೆನ್ಸಸ್ ಆ್ಯಪ್’ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಇದರಲ್ಲಿ ಸಮುದಾಯದ ಜನ ಸ್ವಯಂ ಪ್ರೇರಿತವಾಗಿ ತಮ್ಮ ಮಾಹಿತಿ ಒದಗಿಸ ಬೇಕು. ಅಂತಹವರಿಗೆ ಸ್ಥಳದಲ್ಲಿಯೇ ಡಿಜಿಟಲ್ ಗುರುತುಪತ್ರ ಲಭಿಸಲಿದೆ. ಮುಂದಿನ ದಿನಗಳಲ್ಲಿ ಗುರುತುಪತ್ರವನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯ ಮಾಡುತ್ತೇವೆ’ ಎಂದು ವಿಶ್ವ ಕುಂಚಿಟಿಗ ಯುವಶಕ್ತಿಯ ರಾಷ್ಟ್ರೀಯ ಅಧ್ಯಕ್ಷ ಶಾಂತ್ ತಿಳಿಸಿದ್ದಾರೆ. ‘ಸುಮಾರು 32 ಅಂಶಗಳನ್ನು ಒಳಗೊಂಡಂತಹ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.