ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸದನದಲ್ಲಿ ಮಕ್ಕಳ ಹಕ್ಕುಗಳ ಚರ್ಚೆಯಾಗಲಿ’

Last Updated 19 ಸೆಪ್ಟೆಂಬರ್ 2021, 20:20 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆಯು ರಾಜಕಾರಣಿಗಳನ್ನು ಮಕ್ಕಳ ಹಕ್ಕುಗಳ ತಜ್ಞರನ್ನಾಗಿ ಮಾಡುವ ಗುರಿ ಹೊಂದಿದೆ.

‘ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (ಕೆಸಿಆರ್ಓ) ಮತ್ತು ಯುನಿಸೆಫ್‌ ಸಹಯೋಗ ಹೊಂದಿರುವ ಈ ವೇದಿಕೆಯು ಶಾಸಕರಿಗಾಗಿ ಮಾಹಿತಿ ಹಂಚಿಕೆ ಸಭೆಗಳನ್ನು ಹಮ್ಮಿಕೊಳ್ಳಲಿದ್ದು, ಮಕ್ಕಳ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕ್ಷೇತ್ರ ಭೇಟಿಯನ್ನೂ ಆಯೋಜಿಸಲಿದೆ. ಆಯ್ದ ವಿಚಾರಗಳ ಕುರಿತು ಸರ್ಕಾರದ ನಿಲುವು ಅರಿತುಕೊಂಡು ಪರಿಹಾರ ಕ್ರಮಗಳ ಕುರಿತು ಸಲಹೆ ನೀಡಲಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಮಕ್ಕಳ ಹಕ್ಕುಗಳ ಕುರಿತಾದ ನೀತಿಗಳು ಅಥವಾ ಕಾರ್ಯಕ್ರಮಗಳ ಬಗ್ಗೆ ಸದನದಲ್ಲಿ ಚರ್ಚಿಸುವುದು. ಪ್ರತಿವರ್ಷ ಮಕ್ಕಳು ಮುಖ್ಯಮಂತ್ರಿ ಗಳೊಡನೆ ಸಮಾಲೋಚಿಸಲು ಅನುವಾಗುವಂತೆ ‘ಮಕ್ಕಳ ಹಕ್ಕುಗಳ ಸಂಸತ್’ ಆಯೋಜಿಸುವ ಗುರಿಯನ್ನೂ ಹೊಂದಿದೆ. ಮಕ್ಕಳ ಮತ್ತು ಮಹಿಳೆಯರ ವಿಚಾರಗಳ ಕುರಿತು ಆಸಕ್ತಿಯಿರುವ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೆ ಮುಕ್ತ ಪ್ರವೇಶವಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಮಾಜಿ ಸದಸ್ಯರೂ ಪಾಲ್ಗೊಳ್ಳಬಹುದು’ ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT