ಶುಕ್ರವಾರ, ಡಿಸೆಂಬರ್ 2, 2022
21 °C

ಭಾರತ ಒಡೆದವರಿಂದ ಜೋಡಿಸುವ ಯಾತ್ರೆ: ಬೊಮ್ಮಾಯಿ ವ್ಯಂಗ್ಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಯಾರು ಭಾರತವನ್ನು ಒಡೆದರೋ( ತೋಡೊ) ಮಾಡಿದ್ದಾರೋ ಅವರಿಂದಲೇ ಭಾರತ ಜೋಡಿಸುವ ಯಾತ್ರೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ನಗರದ  ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಸಂಬಂಧ ಶುಕ್ರವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇತಿಹಾಸವನ್ನು ಯಾರು ಮರೆತಿಲ್ಲ. ರಾಜಕೀಯ ಅಸ್ತಿತ್ವಕ್ಕೆ ಹಾಗೂ ಅವರ ಒಳಗಿನ ಹುಳುಕು ಮುಚ್ಚಿಕೊಳ್ಳಲು ಯಾತ್ರೆ ನಡೆಸಿರುವುದು ವಿಪರ್ಯಾಸ ಎಂದರು.

ದಸರಾ ಬಳಿಕ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ರಾಜ್ಯದಾದ್ಯಂತ ಜಂಟಿ ಪ್ರವಾಸ ನಡೆಸುವ ಮೂಲಕ ಚುನಾವಣೆ ಸಿದ್ಧತೆ ನಡೆಸುವುದಾಗಿ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು