ಲಾಕ್ಡೌನ್ ನಿಯಮಾವಳಿ ಸಡಿಲಿಕೆ ಬಗ್ಗೆ ಶನಿವಾರ ತೀರ್ಮಾನ: ಸಿಎಂ ಬಿಎಸ್ವೈ

ಬೆಂಗಳೂರು: ಜೂನ್ 21ರ ಬಳಿಕ ಕೋವಿಡ್ ಲಾಕ್ಡೌನ್ ನಿಯಮಾವಳಿಗಳನ್ನು ಇನ್ನಷ್ಟು ಸಡಲಿಸಬೇಕೆ ಎಂಬ ಬಗ್ಗೆ ಶನಿವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿ ಈಗ ಪರಿಸ್ಥಿತಿ ಸುಧಾರಿಸಿದ್ದು, 3 ನೇ ಅಲೆಯ ಅಪ್ಪಳಿಸುವ ಭೀತಿಯೂ ಇರುವುದರಿಂದ, ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
20 ಜಿಲ್ಲೆಗಳಲ್ಲಿ ಜೂ.14 ರಿಂದ ಭಾಗಶಃ ಲಾಕ್ಡೌನ್ ತೆರವು ಮಾಡಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿದಿತ್ತು. ಲಾಕ್ಡೌನ್ ನಿಯಮಾವಳಿಗಳ ಸಡಿಲಿಕೆ ಇದೇ 21 ರ ಬೆಳಿಗ್ಗೆ 5 ಗಂಟೆಗೆ ಮುಗಿಯಲಿದೆ.
ಇದನ್ನೂ ಓದಿ... ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಶನಿವಾರ ಸಿಎಂ ಯಡಿಯೂರಪ್ಪ ಸಭೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.