ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಪರ್ಸಂಟೇಜ್‌ ಸದ್ದು: ಸಲೀಂ–ಉಗ್ರಪ್ಪ ಸಂಭಾಷಣೆಯಲ್ಲಿ ಏನಿತ್ತು?

Last Updated 14 ಅಕ್ಟೋಬರ್ 2021, 6:35 IST
ಅಕ್ಷರ ಗಾತ್ರ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಆರಂಭಕ್ಕೆ ಮುನ್ನ ಉಗ್ರಪ್ಪ ಅವರ ಬಳಿ ಬಂದು ಕುಳಿತು ಸಲೀಂ ಮಾತನಾಡಿದ್ದು, ಅದಕ್ಕೆ ಉಗ್ರಪ್ಪ ಪ‍್ರತಿಕ್ರಿಯಿಸಿದ್ದರು. ಇಬ್ಬರ ನಡುವಿನ ಸಂಭಾಷಣೆಯಲ್ಲಿ ಏನಿತ್ತು ಎಂಬುದರ ವಿವರ ಇಲ್ಲಿದೆ.

ಸಲೀಂ – ಏನಾಯಿತು ಸಾರ್‌... 6ರಿಂದ 8 ಪರ್ಸೆಂಟ್‌ ಇತ್ತು. 10ರಿಂದ 12 ಪರ್ಸೆಂಟ್‌ ಮಾಡಿದ್ರು. ಅಡ್ಜಸ್ಟ್‌ಮೆಂಟ್‌ ಡಿಕೆದ್ದೂ ಇದೆ..

ಸಲೀಂ– ಜಾಸ್ತಿ ಉಪ್ಪಾರ್, ಜಿ. ಶಂಕರ್, ಹನುಮಂತಪ್ಪ. ಹನುಮಂತಪ್ಪ ಬಳ್ಳಾರಿಯವನು ಗೊತ್ತಾ ಸರ್‌... ಹನುಮಂತಪ್ಪ ಹೊಸಪೇಟೆ. ಇವನು ಉಪ್ಪಾರ್‌, ಬೆಂಗಳೂರು. ಜಿ. ಶಂಕರ್ ಉಡುಪಿ.

ಉಗ್ರಪ್ಪ: ಉಪ್ಪಾರ್‌ ಬಿಜಾಪುರ್

ಸಲೀಂ: ಬಿಜಾಪುರ್‌.. ಮತ್ತೆ ಅವನ ಮನೆ ಎಸ್‌.ಎಂ. ಕೃಷ್ಣ ಮನೆ ಎದುರುಗಡೆ

ಉಗ್ರಪ್ಪ: ಇದು ಇದೆಯಲ್ಲ...

ಸಲೀಂ: ದೊಡ್ಡ ಸ್ಕ್ಯಾಂಡಲ್‌... ಕೆದಕುತ್ತಾ ಹೋದರೆ ಇವರದ್ದೂ ಬರುತ್ತೆ.

ಉಗ್ರಪ್ಪ: ನಾನು ನಿಮಗೆ ಹೇಳಲಾ. ಕಣ್ಣು ಮುಚ್ಚಿ...

ಸಲೀಂ: ನಮ್ಮ ಮುಳಗುಂದ 50 ರಿಂದ 100 ಕೋಟಿ ಮಾಡಿದ್ದಾನೆ. ಮುಳಗುಂದ... ಅವನು 50, 100 ಮಾಡಿದ್ದಾನೆ ಅಂದ್ರೆ ಇವನ ಹತ್ರ ಎಷ್ಟು ಇರಬಹುದು. ಡಿಕೆ ಹತ್ರ. ಲೆಕ್ಕ ಹಾಕಿ.‌ ಅವನು ಬರೀ ಕಲೆಕ್ಷನ್ ಗಿರಾಕಿ.

ಉಗ್ರಪ್ಪ– ನಿಮಗೆಲ್ಲ ಗೊತ್ತಿಲ್ಲ... ನಾವೆಲ್ಲಾ ಪಟ್ಟುಹಿಡಿದು ಅಧ್ಯಕ್ಷನನ್ನಾಗಿ ಮಾಡಿಸಿದ್ದು ಅವನಿಗೆ. ನಮ್‌ ದೌರ್ಭಾಗ್ಯ. ಅವನ ತಕ್ಕಡಿ ಏಳುತ್ತಿಲ್ಲ... ಇವೆಲ್ಲ ಕಾರಣಗಳಿಂದ.

ಸಲೀಂ– ಇಲ್ಲಾ ಸಾರ್‌. ಇಲ್ಲ ಸಾರ್ ಭಾರಿ ಆಯಿತು. ಮತ್ತೆ ನೀವು ನೋಡ್ತೀರಲ್ಲ. ಮಾತನಾಡುವಾಗ ತೊದಲಿಸುತ್ತಾರೆ. ಏನೊ ಲೋ ಬಿಪಿನೊ.. ನೋಡಿ.. ಕುಡುಕರೂ..

ಉಗ್ರಪ್ಪ: ಅದನ್ನೇ ಹೇಳಿದ್ದು ಈಗ.

ಸಲೀಂ; ಸಾರ್‌... ಅರ್ಥ ಆಗಿಲ್ಲ ಅವರಿಗೆ... ಡ್ರಿಂಕ್ಸ್‌ ಮಾಡಿದ್ದಾರಾ ಅಂತಾರೆ. ಡ್ರಿಂಕ್ಸ್‌ ಮಾಡಲಿಲ್ಲ. ಅದು ಆ್ಯಕ್ಚುವಲಿ.. (ಇಬ್ಬರೂ ನಗು)

ಸಲೀಂ (ನಗುತ್ತಲೇ): ಮಾತಾಡುವ ಶೈಲಿ... (ಮತ್ತೆ ಇಬ್ಬರೂ ಜೋರು ನಗು)

ಸಲೀಂ– ಲೋ ಬಿಪಿ... ಎಮೋಷನ್‌ನಲಿ ಹೋಗ್ತಾರೆ... ಇನ್ನೊಂದು, ಬಾಡಿ ಲಾಂಗ್ವೇಜ್‌ ಇವರದ್ದು ಹೆಂಗಿದೆ ಸಾರ್‌... ಸಿದ್ದರಾಮಯ್ಯನವರದ್ದು. ಖಡಕ್ ಅಂದ್ರೆ ಖಡಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT