ಬಿಜೆಪಿ ಸರ್ಕಾರದ ಕಮಿಷನ್ ಲೂಟಿ ಜನರ ಬದುಕನ್ನೇ ಕಸಿಯುತ್ತಿದೆ: ಕಾಂಗ್ರೆಸ್ ಕಿಡಿ

ಬೆಂಗಳೂರು: ಬಿಜೆಪಿ ಸರ್ಕಾರದ ಕಮಿಷನ್ ಲೂಟಿಯು ರಾಜ್ಯದ ಜನರ ಬದುಕನ್ನೇ ಕಸಿಯುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯದಾದ್ಯಂತ ಅಣೆಕಟ್ಟೆಗಳ ನಿರ್ಮಾಣ, ಆಧುನೀಕರಣಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಖರ್ಚು ಮಾಡಲಾಗುತ್ತಿದೆಯಾದರೂ, ಹೊಲಗಳಿಗೆ ಮಾತ್ರ ಸಮರ್ಪಕವಾಗಿ ನೀರು ಹರಿದುಬರುತ್ತಿಲ್ಲ. ಕಳಪೆ ಕಾಮಗಾರಿ, ಭ್ರಷ್ಟಾಚಾರದ ಆರೋಪಗಳೂ ಕೇಳಿಬರುತ್ತಿವೆ ಎಂದು ಪ್ರಜಾವಾಣಿಯಲ್ಲಿ ಇಂದು (ಡಿಸೆಂಬರ್ 25ರಂದು) ವರದಿ ಪ್ರಕಟವಾಗಿದೆ.
'ಹಣದ ಹೊಳೆ: ಹೊಲಕ್ಕಿಲ್ಲ ನೀರು' ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನು ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ಗುಡುಗಿದೆ.
'ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಲೂಟಿಯು ರಾಜ್ಯದ ಜನರ ಬದುಕನ್ನೇ ಕಸಿಯುತ್ತಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಯಲ್ಲಿ ಭ್ರಷ್ಟಾಚಾರದಿಂದ ಕಳಪೆ ಕಾಮಗಾರಿ ನಡೆದು ರೈತರ ಹೊಲಕ್ಕೆ ನೀರು ಕಾಣದಾಗಿದೆ. ಹೀಗಿದ್ದೂ ತನಿಖೆ ನಡೆಸಲು, ಕ್ರಮ ಕೈಗೊಳ್ಳಲು ನೀರಾವರಿ ಸಚಿವರಿಗೆ ಮುಹೂರ್ತ ಕೂಡಿ ಬರಲಿಲ್ಲ!' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಓದಿ... ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ
'@BJP4Karnataka ಸರ್ಕಾರದ 40% ಕಮಿಷನ್ ಲೂಟಿ ರಾಜ್ಯದ ಜನರ ಬದುಕನ್ನೇ ಕಸಿಯುತ್ತಿದೆ.
ಕೃಷ್ಣ ಮೇಲ್ದಂಡೆ ಯೋಜನೆಯ ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಯಲ್ಲಿ ಭ್ರಷ್ಟಾಚಾರದಿಂದ ಕಳಪೆ ಕಾಮಗಾರಿ ನಡೆದು ರೈತರ ಹೊಲಕ್ಕೆ ನೀರು ಕಾಣದಾಗಿದೆ.
ಹೀಗಿದ್ದೂ ತನಿಖೆ ನಡೆಸಲು, ಕ್ರಮ ಕೈಗೊಳ್ಳಲು ನೀರಾವರಿ ಸಚಿವರಿಗೆ ಮಹೂರ್ತ ಕೂಡಿ ಬರಲಿಲ್ಲ! pic.twitter.com/8xORK4qedG
— Karnataka Congress (@INCKarnataka) December 25, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.