ಗುರುವಾರ , ಜೂನ್ 30, 2022
25 °C

ಮೂಗಿಗೆ ತುಪ್ಪ ಒರೆಸುವ ಯತ್ನ: ಜನಾಗ್ರಹ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿರುವ ₹ 500 ಕೋಟಿ ಮೊತ್ತದ ಎರಡನೇ ಪರಿಹಾರ ‍ಪ್ಯಾಕೇಜ್‌ ಕೂಡ ನಿರಾಶಾದಾಯಕ. ಇದು ಜನರ ಮೂಗಿಗೆ ತುಪ್ಪ ಸವರುವ ಯತ್ನ ಎಂದು ಜನಾಗ್ರಹ ಆಂದೋಲನ ಟೀಕಿಸಿದೆ.

ಈ ಕುರಿತು ಜಂಟಿ ಹೇಳಿಕೆ ನೀಡಿರುವ ಜನಾಗ್ರಹದ ಸಸಿಕಾಂತ್‌ ಸೆಂಥಿಲ್‌, ಎಚ್‌.ಆರ್‌. ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್‌, ಮಾವಳ್ಳಿ ಶಂಕರ್‌, ಕೆ.ಎಲ್‌. ಅಶೋಕ್‌, ಸ್ವರ್ಣಾ ಭಟ್‌, ಯಾಸೀನ್‌ ಮಲ್ಪೆ, ಯೂಸೂಫ್‌ ಕನ್ನಿ, ಡಾ.ಸಿದ್ದನಗೌಡ ಪಾಟೀಲ ಮತ್ತು ನೂರ್‌ ಶ್ರೀಧರ್‌, ‘ಗ್ರಾಮೀಣ ಕೂಲಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರು, ಆದಿವಾಸಿಗಳು ಮತ್ತು ಅಲೆಮಾರಿ ಜನರನ್ನು ಪ್ಯಾಕೇಜ್‌ನಲ್ಲಿ ಪರಿಗಣಿಸಿಯೇ ಇಲ್ಲ’ ಎಂದು ದೂರಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ನಿಂದ ಜನರು ನಿತ್ಯದ ಆದಾಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಅತ್ಯಲ್ಪ ನೆರವು ನೀಡುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. 70 ಲಕ್ಷ ಬಡ ಕುಟುಂಬಗಳಿರುವ ರಾಜ್ಯದಲ್ಲಿ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ ಐದು ಲಕ್ಷ ಜನರನ್ನೂ ತಲುಪುವುದಿಲ್ಲ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೂ ಸಮಗ್ರ ಆಹಾರದ ಕಿಟ್‌ ಮತ್ತು ತಿಂಗಳಿಗೆ ₹ 5,000 ನೆರವು ನೀಡಬೇಕು. ಕೋವಿಡ್‌ನಿಂದ ಅನಾಥವಾಗಿರುವ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು. ರೈತರಿಗೆ ಉಚಿತವಾಗಿ ಗೊಬ್ಬರ ಮತ್ತು ಬಿತ್ತನೆ ಬೀಜ ವಿತರಿಸಬೇಕು. ರಾಜ್ಯದ ಎಲ್ಲ ಜನರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು