ಮಂಗಳವಾರ, ಜೂನ್ 15, 2021
25 °C

ಕಲ್ಯಾಣ ಕರ್ನಾಟಕ: ಕೋವಿಡ್ ಲಸಿಕೆ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೊರೊನಾ ಲಸಿಕೆಯ ದಾಸ್ತಾನು ಕಲಬುರ್ಗಿ, ಬೀದರ್‌, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಡಿಮೆಯಾಗುತ್ತಿದೆ.

ಕಲಬುರ್ಗಿ ಜಿಲ್ಲೆಯಲ್ಲಿ 6,156 ಡೋಸ್ ಮಾತ್ರ ಸಂಗ್ರಹ ಇದೆ. ‘1.97 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಇದ್ದು, 76,610 ಡೋಸ್ ಲಸಿಕೆ ತರಿಸಿಕೊಳ್ಳಲಾಗಿತ್ತು. ಅದರಲ್ಲಿ ಕೋವಿಶೀಲ್ಡ್ 65,410 ಡೋಸ್‌, ಕೋವ್ಯಾಕ್ಸಿನ್ 11,200 ಡೋಸ್‌ನಷ್ಟು ಇತ್ತು. 64 ಸಾವಿರ ಡೋಸ್‌ ಬಳಕೆಯಾಗಿದ್ದು,  ಅಗತ್ಯವಿರುವಷ್ಟು ದಾಸ್ತಾನು ಕಳುಹಿಸಿಕೊಡಲು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎಂದು ಕಲಬುರ್ಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ತಿಳಿಸಿದರು.

ಓದಿ: 

 

‘ಯಾದಗಿರಿ ಜಿಲ್ಲೆಗೆ  20 ಸಾವಿರ ಡೋಸ್‌ ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಪಾಟೀಲ ಹೇಳಿದರು.

‘ರಾಯಚೂರು ಜಿಲ್ಲೆಯಲ್ಲಿ ಈ ವರೆಗೆ 65 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಚಿತ್ರದುರ್ಗ ಮತ್ತು ನೆರೆಯ ಜಿಲ್ಲೆಗಳಿಂದ ಲಸಿಕೆ ತರಿಸಿಕೊಂಡು ಕೊರತೆ ನೀಗಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಿಂದ ಲಸಿಕೆ ಹಂಚಿಕೆಯಾಗಲಿದ್ದು, ಸಮಸ್ಯೆ ಇಲ್ಲ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಪ್ರತಿಕ್ರಿಯಿಸಿದರು.

‘ಕೋವಿಶೀಲ್ಡ್‌ ಪೂರೈಕೆಯಲ್ಲಿ ಕೊರತೆ ಇದೆ. ಜಿಲ್ಲೆಗೆ 73 ಸಾವಿರ ಡೋಸ್‌ ಲಸಿಕೆ ಬಂದಿದ್ದು, 65 ಸಾವಿರ ಜನರಿಗೆ ಕೊಡಲಾಗಿದೆ. ಕೋವ್ಯಾಕ್ಸಿನ್‌ 11,200 ಡೋಸ್‌ ಬಂದಿದೆ. ನಿತ್ಯ ಐದರಿಂದ ಆರು ಸಾವಿರ ಜನರಿಗೆ ಲಸಿಕೆ ಕೊಡುತ್ತಿದ್ದೇವೆ. ಎರಡು ದಿನಕ್ಕೆ ಆಗುವಷ್ಟು ಮಾತ್ರ ಲಸಿಕೆ ಇದೆ’ ಎಂದು ಬೀದರ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಮಾಹಿತಿ ನೀಡಿದರು.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು