ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಾಖಲೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಹಲವು ತಿಂಗಳು ಬಳಿಕ ಇದೇ ಮೊದಲ ಬಾರಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 830 ಪ್ರಕರಣಗಳು ಮಾತ್ರ ದಾಖಲಾಗಿವೆ.
ಐದಾರು ತಿಂಗಳ ಬಳಿಕ ನವೆಂಬರ್ 30ರಂದು 998 ಪ್ರಕಣಗಳು ದಾಖಲಾಗುವ ಮೂಲಕ ಪ್ರಕರಣಗಳ ಸಂಖ್ಯೆ 1 ಸಾವಿರಕ್ಕಿಂತ ಕಡಿಮೆಯಾಗಿತ್ತು.
ಭಾನುವಾರವಾದ ಕಾರಣ ಕೋವಿಡ್ ಪರೀಕ್ಷೆ ಕೂಡ ಕಡಿಮೆಯಾಗಿತ್ತು. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಭಾನುವಾರ 64,855 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 2,164 ಮಂದಿ ಗುಣಮುಖರಾಗಿದ್ದು, 10 ಸೋಂಕಿತರು ಸಾವಿಗೀಡಾಗಿದ್ದಾರೆ.
ಈ ಹಿಂದೆ ಜೂನ್‌ನಲ್ಲಿ ದಿನವೊಂದಕ್ಕೆ ಒಂದು ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿದ್ದವು. ನಂತರ ಭಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ 11 ಸಾವಿರ ಸಮೀಪಿಸಿದ್ದವು. ಹತ್ತಕ್ಕೂ ಹೆಚ್ಚು ಬಾರಿ ಈ ಸಂಖ್ಯೆ 10 ಸಾವಿರ ದಾಟಿದ್ದವು. ಆದರೆ, ಅಕ್ಟೋಬರ್ ಎರಡನೇ ವಾರದಿಂದ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ನವೆಂಬರ್ ಮೊದಲ ವಾರ ಮೂರು ಸಾವಿರಕ್ಕೆ, ಎರಡನೇ ವಾರ ಎರಡು ಸಾವಿರಕ್ಕೆ ಇಳಿಕೆಯಾಗಿದ್ದವು.
ರಾಜ್ಯದಲ್ಲಿ ಒಟ್ಟಾರೆ ಇಲ್ಲಿಯವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 9.02 ಲಕ್ಷ ಮುಟ್ಟಿದೆ. ಈ ಪೈಕಿ 8.74 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ 11,954 ಸೋಂಕಿತರ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.