ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಳ

Last Updated 7 ಡಿಸೆಂಬರ್ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು:ಓಮೈಕ್ರಾನ್‌ ಪತ್ತೆಯಾದ ಬೆನ್ನಲ್ಲೇಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಆರ್‌ಟಿ–ಪಿಸಿಆರ್‌ ವರದಿಯನ್ನು ತ್ವರಿತವಾಗಿ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

‘ವಿಮಾನ ಹಾರಾಟ ಕಾರ್ಯಾಚರಣೆ ವೇಳೆ ಕೋವಿಡ್‌ ಹರಡದಂತೆ ನಿಯಂತ್ರಿಸಲು ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಲುವಾಗಿ ಆರಂಭಿಸಲಾದ ಕೋವಿಡ್ ಪರೀಕ್ಷಾ ಕೇಂದ್ರವನ್ನು ಆರಿಗಾ ರಿಸರ್ಚ್ ಸಂಸ್ಥೆ ನಿರ್ವಹಿಸುತ್ತಿದೆ. ಈಸಂಸ್ಥೆಯು ಪ್ರಯಾಣಿಕರಿಗೆ ಡಿಜಿಟಲ್ ಮಾದರಿಯಲ್ಲಿ ಪರೀಕ್ಷೆಯ ವರದಿ ನೀಡುವ ಸಲುವಾಗಿ ಈವರೆಗೆ 8 ಯಂತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಈಗ ಯಂತ್ರಗಳ ಸಂಖ್ಯೆಯನ್ನು 58ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಪರೀಕ್ಷಾ ವರದಿ ಪಡೆಯಲು ಗಂಟೆಗಟ್ಟಲೇ ಕಾಯುವುದು ತಪ್ಪಲಿದೆ’ ಎಂದುಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ (ಬಿಐಎಎಲ್‌) ಪ್ರಕಟಣೆ ತಿಳಿಸಿದೆ.

‘ವಿವಿಧೆಡೆಯಿಂದ ಇಲ್ಲಿಗೆ ಬರುವ ಹಾಗೂ ಇಲ್ಲಿಂದ ಬೇರೆಡೆಗೆ ತೆರಳುವ ಪ್ರಯಾಣಿಕರ ಕೋವಿಡ್‌ ಪರೀಕ್ಷೆಗಾಗಿ ಟರ್ಮಿನಲ್‌ಗಳಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಂತರ ನಿಯಮವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ವೃದ್ಧರು, ಮಕ್ಕಳು ಹಾಗೂ ಹಾಲುಣಿಸುವ ತಾಯಂದಿರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಅವರಿಗಾಗಿ ವಿಶೇಷ ಪರೀಕ್ಷಾ ಕೌಂಟರ್‌ಗಳನ್ನೂ ತೆರೆಯಲಾಗಿದೆ’ ಎಂದು ಹೇಳಿದೆ.

‘ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಪ್ರಯಾಣಿಕರ ಗಂಟಲ ದ್ರವ ಸಂಗ್ರಹಿಸಲಾಗುತ್ತಿದ್ದು, ಅವರು ಬ್ಯಾಗೇಜ್‌ ಪಡೆದುಕೊಳ್ಳುವಷ್ಟರಲ್ಲಿ ಕೋವಿಡ್‌ ಪರೀಕ್ಷಾ ವರದಿ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT