ಮಂಗಳವಾರ, ಏಪ್ರಿಲ್ 20, 2021
32 °C

ನ್ಯಾಯವಿಜ್ಞಾನ ಪದವೀಧರರ ನೇಮಕಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಪರಾಧ ಮತ್ತು ನ್ಯಾಯವಿಜ್ಞಾನ ಪದವೀಧರರ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅಪರಾಧಶಾಸ್ತ್ರ ಮತ್ತು ನ್ಯಾಯವಿಜ್ಞಾನ ವಿಭಾಗದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕರ ಒಕ್ಕೂಟ ಹಾಗೂ ಇಂಡಿಯನ್ ಫೊರೆನ್ಸಿಕ್ ವಿದ್ಯಾರ್ಥಿಗಳ ಸಂಘಟನೆ ಒತ್ತಾಯಿಸಿದೆ.

‘ಹೆಚ್ಚುತ್ತಿರುವ ಅಪರಾಧ ಪ್ರಕರಣ ವಿರುದ್ಧ ದೂರುಗಳು ದಾಖಲಾಗುತ್ತಿವೆ. ಆದರೆ, ವಿಚಾರಣೆ ಸೇರಿದಂತೆ ಎಲ್ಲ ಪ್ರಕ್ರಿಯೆ ಮುಗಿಯುವುದು ವಿಳಂಬವಾಗುತ್ತಿದ್ದು, ಆರೋಪಿಗಳಿಗೆ ಶಿಕ್ಷೆ ಒದಗಿಸುವುದಕ್ಕೂ ತಡವಾಗುತ್ತಿರುವುದರಿಂದ ಬಹುತೇಕರು ಬಿಡುಗಡೆಯಾಗುತ್ತಿದ್ದಾರೆ. ಇದು ತಪ್ಪಿ, ಅಪರಾಧ ನ್ಯಾಯವ್ಯವಸ್ಥೆ ಸುಧಾರಿಸಬೇಕೆಂದರೆ ಸಾಕ್ಷ್ಯ, ಅಪರಾಧ ಪತ್ತೆಗೆ ಅಪರಾಧ ಮತ್ತು ನ್ಯಾಯವಿಜ್ಞಾನ ಪದವೀಧರರನ್ನು ಬಳಸಿಕೊಳ್ಳಬೇಕಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಟರಾಜ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆ, ಕಾರಾಗೃಹ, ನ್ಯಾಯಾಂಗ, ಎಲ್ಲ ನ್ಯಾಯ ವಿಜ್ಞಾನ ಪ್ರಯೋಗಾಲಯ, ಸಾರಿಗೆ, ಸರ್ಕಾರಿ ಪತ್ತೆದಾರಿ ಮತ್ತು ಭದ್ರತಾ ಕ್ಷೇತ್ರ, ಬ್ಯಾಂಕು ಮತ್ತು ಹಣಕಾಸು ಸಂಸ್ಥೆ ಸೇರಿದಂತೆ ವಿವಿಧ 13 ಇಲಾಖೆಗಳಲ್ಲಿ ಈ ಹುದ್ದೆಗಳಿಗೆ ಅರ್ಹ ಪದವೀಧರರನ್ನು ನೇಮಿಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಧಾರವಾಡ, ದಾವಣಗೆರೆ, ಬೆಳಗಾವಿ, ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರ 9 ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಸುಮಾರು 40 ಶಿಕ್ಷಣ ಸಂಸ್ಥೆಗಳಿಂದ ಪ್ರತಿ ವರ್ಷ ಅಪರಾಧ ಮತ್ತು ನ್ಯಾಯವಿಜ್ಞಾನ ವಿಭಾಗದಿಂದ ನೂರಾರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಬರುತ್ತಿದ್ದಾರೆ. ಅವರಿಗೆ ಇರುವ ವಿಫುಲ ಅವಕಾಶಗಳಿದ್ದರೂ, ಅವುಗಳ ಸದ್ಬಳಕೆ ಆಗುತ್ತಿಲ್ಲ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.