ಭಾನುವಾರ, ನವೆಂಬರ್ 29, 2020
25 °C

ಮತಗಟ್ಟೆ ಬಳಿಯೇ ಹಣ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ (ತುಮಕೂರು): ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬುಧವಾರ ನಡೆದ ಮತದಾನದ ವೇಳೆ ಇಲ್ಲಿಯ ಮತಗಟ್ಟೆ ಯೊಂದರ ಬಳಿಯೇ ಮತದಾರರಿಗೆ ರಾಜಾರೋಷವಾಗಿ ಹಣ, ಬ್ಯಾಗ್, ವಾಚ್ ಹಂಚಿದ ಆರೋಪಗಳು ಕೇಳಿಬಂದಿವೆ. 

ಪಟ್ಟಣದ ಸರ್ಕಾರಿ ಪಿ.ಯು ಕಾಲೇಜು ಮತಗಟ್ಟೆ ಬಳಿ ಪಕ್ಷೇತರ ಅಭ್ಯರ್ಥಿಯೊಬ್ಬರ ಪರವಾಗಿ ಸರ್ಕಾರಿ ಪದವಿ ಕಾಲೇಜು ಮತ್ತು ಪಿಯು ಕಾಲೇಜು ಉಪನ್ಯಾಸಕರು ಹಣ ಹಂಚಿದರು. ಮತವೊಂದಕ್ಕೆ ₹ 1,500 ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಳಿದ ರಾಜಕೀಯ ಪಕ್ಷಗಳ ಬೆಂಬಲಿಗರು ಕೂಡ ಬ್ಯಾಗ್‌, ಹಣ ಮತ್ತು ವಾಚ್‌ ಮುಂತಾದ ಉಡುಗೊರೆ ಹಂಚಿದರು. ಮೂರು ಪ್ರಮುಖ ರಾಜಕೀಯ ಪಕ್ಷಗಳ‌ ಅಭ್ಯರ್ಥಿಗಳಿಗಿಂತ ಪಕ್ಷೇತರ ಅಭ್ಯರ್ಥಿಯ ಪರವಾಗಿ ಹಣ ಹಂಚಿಕೆ ಅಬ್ಬರ ಜೋರಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು