ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ: ಆತಂಕ ಬೇಡವೆಂದ ಮಗಳು ಐಶ್ವರ್ಯ

Last Updated 18 ಜುಲೈ 2022, 7:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಶಾಲೆಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಒಡೆತನದಲ್ಲಿದೆ. ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ವಿದ್ಯಾರ್ಥಿಗಳಪೋಷಕರ ಜೊತೆ ಮಾತನಾಡುತ್ತಿರುವ ಮಗಳು ಐಶ್ವರ್ಯ, ಆತಂಕಪಡುವ ಅಗತ್ಯವಿಲ್ಲವೆಂದು ಹೇಳುತ್ತಿದ್ದಾರೆ.

ಬಾಂಬ್ ಬೆದರಿಕೆಯಿಂದ ಆತಂಕಗೊಂಡಿದ್ದ ಪೋಷಕರು, ಶಾಲೆ ಎದುರು ಸೇರಿದ್ದಾರೆ. ಅವರ ಜೊತೆ ಮಾತಮಾಡುತ್ತಿರುವ ಐಶ್ವರ್ಯ, 'ಬಾಂಬ್ ಬೆದರಿಕೆ ನಮಗೂ ಆತಂಕ ತಂದಿದೆ. ಮಕ್ಕಳನ್ನು ಈಗಾಗಲೇ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಲಾಗಿದ್ದು, ಆತಂಕ ಪಡಬೇಡಿ. ಆಡಳಿತ ಮಂಡಳಿ ಜೊತೆ ಸಹಕರಿಸಿ' ಎನ್ನುತ್ತಿದ್ದಾರೆ.

'ಪೊಲೀಸರು ಶಾಲೆಗೆ ಬಂದು ತಪಾಸಣೆ ನಡೆಸುತ್ತಿದ್ದಾರೆ. ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವ ಜವಾಬ್ದಾರಿ ನಮ್ಮದು. ಪೋಷಕರು ಸಹ ನಮ್ಮ ಜೊತೆಗಿದ್ದು, ಪರಿಸ್ಥಿತಿ ನಿಭಾಯಿಸಲು ಸಹಕರಿಸಬೇಕು' ಎಂದೂ ಮನವಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT