ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನನ್ ಖಾತೆಯಲ್ಲಿರೋ ದುಡ್ಡೆಲ್ಲಾ ಯಾವುದೋ ಖಾತೆಗೆ ಹೋಗಿ ಕ್ವಾರಂಟೈನ್ ಆಗ್ಬಿಟ್ಟೈತೆ'

ಸೈಬರ್ ಅಪರಾಧ
Last Updated 19 ಆಗಸ್ಟ್ 2020, 3:17 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಸೋಂಕುಸಾಂಕ್ರಾಮಿಕವಾಗಿ ಹಬ್ಬಿರುವ ಈ ಸಂದರ್ಭದಲ್ಲಿ ವೆಬ್‌ಸೈಟ್‌ಗಳಿಗೆ ಕನ್ನ ಹಾಕುವುದು ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯೇ ಎಚ್ಚರಿಸಿದೆ. ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುವಜನರು ಈಗ ಎಷ್ಟುಎಚ್ಚರಿಕೆಯಿಂದಿದ್ದರೂ ಸಾಲದು ಎನ್ನುವಂತಾಗಿದೆ.

ಜನರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿರುವ ಸಿಐಡಿ ಸೈಬರ್ ಕ್ರೈಮ್ ವಿಭಾಗವು ಸಾಧುಕೋಕಿಲ ಅವರ ಚಿತ್ರವಿರುವ ವಿಶಿಷ್ಟ ಪೋಸ್ಟರ್ ಒಂದನ್ನುಟ್ವೀಟ್ ಮಾಡಿ ಗಮನ ಸೆಳೆದಿದೆ.

ಉಚಿತವಾಗಿ ಏನನ್ನಾದರೂ ನೀಡುವ ಅಥವಾ ಪರಿಶೀಲನೆಗಾಗಿ ಎಂದು ಸುಳ್ಳುಕೇಳುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ಕಿಸಬೇಡಿ ಎಂದು ಟ್ವೀಟ್ ಮಾಡಿದ್ದು, 'ಸಿವನೇ ಕೊರೊನಾ ಟೈಮಲ್ಲೂ ಕಾಲ್ ಮಾಡಿ ಬ್ಯಾಂಕ್ ಇಎಂಐ ಕಟ್ಬಾರ್ದು ಅಂದ್ರೆ ಒಂದ್ ಲಿಂಕ್ ಕಳುಸ್ತೀವಿ ಕ್ಲಿಕ್ ಮಾಡಿ. ನಿಮ್ ಮೊಬೈಲಲ್ಲಿ ಅಪ್ಡೇಟ್ ಮಾಡ್ಕಳಿ ಅಂದ್ರು. ಅದೇ ಖುಷೀಲಿ ಮಾಡ್ದೆ ನೋಡಿ ಸಿವ. ನನ್ ಖಾತೆಯಲ್ಲಿರೋ ದುಡ್ಡೆಲ್ಲಾ ಯಾವುದೋ ಖಾತೆಗೆ ಹೋಗಿ ಕ್ವಾರಂಟೈನ್ ಆಗ್ಬಿಟ್ಟೈತೆ' ಎಂದು ಬರಹವನ್ನೊಳಗೊಂಡಿರುವ ಪೋಸ್ಟರ್ ಶೇರ್ ಮಾಡಿದೆ.

‘ವೆಬ್‌ಸೈಟ್‌ಗಳಿಗೆ ಕನ್ನ ಹಾಕುತ್ತಿರುವುದರಿಂದ ಸಹಜವಾಗಿ ಸೈಬರ್‌ ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ’ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಘಟಕದ ಮುಖ್ಯಸ್ಥ ವ್ಲಾದಿಮಿರ್‌ ವೊರೊಂಕಾವ್‌ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಈಚೆಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT