ಗುರುವಾರ , ಜೂನ್ 30, 2022
23 °C

ದೇವೇಗೌಡರಿದ್ದ ಹೆಲಿಕಾಪ್ಟರ್‌ ಬಳಿ ಡ್ರೋನ್‌ ಹಾರಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಬಸ್‌ಪೇಟೆ: ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರು ಇದ್ದ ಹೆಲಿಕಾಪ್ಟರ್ ಬಳಿಯೇ ಡ್ರೋನ್ ಹಾರಾಟ ನಡೆಸಿದ್ದರಿಂದ ಭಾನುವಾರ ಕೆಲ ಕಾಲ ಆತಂಕ ಸೃಷ್ಟಿಯಾಯಿತು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇವೇಗೌಡರು ಇಲ್ಲಿಗೆ ಸಮೀಪದ ನಿಡವಂದಕ್ಕೆ ಬಂದಿದ್ದರು. ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಅವರು ಹೆಲಿಕಾಪ್ಟರ್‌ನಿಂದ ಇಳಿಯುವ ಸಂದರ್ಭದಲ್ಲೇ ಡ್ರೋನ್‌ವೊಂದು ಸಮೀಪದಲ್ಲಿ ಹಾರಾಟ ನಡೆಸಿತು.

ಭದ್ರತಾ ಸಿಬ್ಬಂದಿ ತಕ್ಷಣವೇ ಡ್ರೋನ್‌ ಹಾರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ, ಹಾರಾಟವನ್ನು ನಿಲ್ಲಿಸುವಂತೆ ಸೂಚಿಸಿದರು. ಡ್ರೋನ್ ಹಾರಾಟ ನಿಂತ ಬಳಿಕ ದೇವೇಗೌಡರು ಹೆಲಿಕಾಪ್ಟರ್‌ನಿಂದ ಕೆಳಗಿಳಿದು, ಕಾರ್ಯಕ್ರಮಕ್ಕೆ ತೆರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು