ಒಡಿಶಾ ಹಾಕಿಯನ್ನು ಪ್ರೋತ್ಸಾಹಿಸಿದಂತೆ ಎಲ್ಲ ರಾಜ್ಯಗಳೂ ಒಂದೊಂದು ಕ್ರೀಡೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಈ ಮೂಲಕ ಪ್ರತಿಯೊಂದು ಕ್ರೀಡೆಗೆ ಪ್ರೋತ್ಸಾಹ ಸಿಗುವಂತೆ ಮಾಡುವುದು, ವಿಶ್ವ ಮಟ್ಟದ ಕೂಟದಲ್ಲಿ ಭಾರತದ ಘನತೆ ಎತ್ತಿ ಹಿಡಿಯುವುದು ಆದ್ಯತೆ ಆಗಬೇಕು. ಸಂಸದೀಯ ಸ್ಥಾಯಿಸಮಿತಿ(ಕ್ರೀಡೆ) ಇದೇ ಶಿಫಾರಸ್ಸನ್ನು ಕೇಂದ್ರಕ್ಕೆ ಮಾಡಿದೆ