ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನ ಮೂಲಕ ತಾಜಾ ಹಣ್ಣುಗಳ ಆಮದು

Last Updated 10 ಜೂನ್ 2021, 17:20 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿರುವ ಕಂಟೇನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ಐಜಿ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌ ಸಹಯೋಗದೊಂದಿಗೆ ಮೊದಲ ಬಾರಿಗೆ ಸರಕು ಸಾಗಾಣೆ ರೈಲಿನ ಮೂಲಕ ತಾಜಾ ಹಣ್ಣುಗಳನ್ನು ಆಮದು ಮಾಡಿಕೊಂಡಿದೆ.

ಬ್ರೆಜಿಲ್‌, ಚಿಲಿ ಹಾಗೂ ಇರಾನ್‌ನಿಂದ ಮುಂಬೈಗೆ ಬಂದಿದ್ದ ಸೇಬು, ಕಿವಿ, ಚೆರ್ರಿ ಸೇರಿದಂತೆ ಅನೇಕ ಹಣ್ಣುಗಳನ್ನುಶೈತ್ಯೀಕೃತವಾಗಿದ್ದ 44 ಕಂಟೇನರ್‌ಗಳಲ್ಲಿ ಬೆಂಗಳೂರಿಗೆ ತರಿಸಿಕೊಳ್ಳಲಾಗಿದೆ. ವಿದೇಶದಿಂದ ತಂದ ಹಣ್ಣುಗಳನ್ನು ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಮಾರಲು ಇದರಿಂದ ಸಹಾಯಕವಾಗಲಿದೆ.

ಐಜಿ ಇಂಟರ್‌ನ್ಯಾಷನಲ್‌ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗ್ಯಾನ್‌ಚಂದ್‌ ಅರೋರಾ ‘ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸುತ್ತಾರೆ. ಅಂತಹವರಿಗೆ ತಾಜಾ ಹಣ್ಣುಗಳನ್ನು ಪೂರೈಸುವುದು ನಮ್ಮ ಉದ್ದೇಶ. ಹೀಗಾಗಿ ಕಾನ್‌ಕರ್‌ ಸಹಭಾಗಿತ್ವದಲ್ಲಿ ತಾಜಾ ಹಣ್ಣುಗಳನ್ನು ಆಮದು ಮಾಡಿಕೊಂಡು ಅವುಗಳನ್ನು ವಿವಿಧ ನಗರಗಳಿಗೆ ಸಾಗಾಣಿಕೆ ಮಾಡಲು ನಿರ್ಧರಿಸಿದ್ದೇವೆ’ ಎಂದರು.

ಕಾನ್‌ಕರ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಅನೂಪ್ ದಯಾನಂದ್‌ ‘ಕೋವಿಡ್‌ ಹೆಚ್ಚುತ್ತಿರುವ ಸಂದರ್ಭದಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ತೆಗೆದುಕೊಳ್ಳುವುದು ತೀರಾ ಅಗತ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಜಗತ್ತಿನ ನಾನಾ ಭಾಗಗಳಿಂದ ತಾಜಾ ಹಣ್ಣುಗಳನ್ನು ತರಿಸಲಾಗುತ್ತಿದೆ. ಈ ಕಾರ್ಯದಲ್ಲಿ ಐಜಿ ಇಂಟರ್‌ನ್ಯಾಷನಲ್‌ ಜೊತೆ ಕೈಜೋಡಿಸಿರುವುದು ಸಂತಸ ನೀಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT