ಮಂಗಳವಾರ, ಮಾರ್ಚ್ 28, 2023
33 °C

ಬೆಂಗಳೂರು: ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ₹ 25 ಸಾವಿರಕ್ಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ಕಾಯಂ ನೌಕರರಿಗೆ ಪ್ರತಿ ಆರ್ಥಿಕ ವರ್ಷದಲ್ಲಿ ಒಂದು ಬಾರಿ ಬಡ್ಡಿ ರಹಿತವಾಗಿ ನೀಡುವ ಹಬ್ಬದ ಮುಂಗಡವನ್ನು ₹ 25,000ಕ್ಕೆ ಹೆಚ್ಚಿಸಿ ಹಣಕಾಸು ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಅಖಿಲ ಭಾರತ ಸೇವೆಯ ಅಧಿಕಾರಿಗಳೂ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಕಾಯಂ ನೌಕರರಿಗೂ ಈ ಸೌಲಭ್ಯವಿದೆ. ಈವರೆಗೂ ವರ್ಷಕ್ಕೆ ಒಂದು ಬಾರಿ ₹ 10,000 ಹಬ್ಬದ ಮುಂಗಡ ನೀಡಲಾಗುತ್ತಿತ್ತು. ಈ ಮಿತಿಯನ್ನು ₹ 25,000ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿತ್ತು. ಅದನ್ನು ಪುರಸ್ಕರಿಸಿರುವ ಆರ್ಥಿಕ ಇಲಾಖೆ, ಹಬ್ಬದ ಮುಂಗಡದ ಮಿತಿಯನ್ನು ಹೆಚ್ಚಿಸಿದೆ.

‘ರಾಜ್ಯ ಸರ್ಕಾರದಲ್ಲಿ ಒಟ್ಟು 5.25 ಲಕ್ಷ ಕಾಯಂ ನೌಕರರಿದ್ದಾರೆ. ಮಿತಿಯನ್ನು ಹೆಚ್ಚಿಸಿರುವ ಆದೇಶದಿಂದ ‘ಸಿ’ ಮತ್ತು ‘ಡಿ’ ದರ್ಜೆ ನೌಕರರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು