ಶನಿವಾರ, ಆಗಸ್ಟ್ 13, 2022
26 °C

ಅಪಹಾಸ್ಯ ಬೇಡ– ಹೋರಾಡುವ ಶಕ್ತಿ ಇದೆ: ಕೆ.ಎನ್‌.ರಾಜಣ್ಣಗೆ ದೇವೇಗೌಡರ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೂತರೆ ಎದ್ದೇಳಲು ಆಗಲ್ಲ. ನನ್ನಲ್ಲಿ ಶಕ್ತಿ ಇಲ್ಲ ಎಂದು ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ. ಶಕ್ತಿ ಇದೆ ಎಂಬುದನ್ನು ಹೋರಾಟದ ಮೂಲಕ ತೋರಿಸುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೆ.ಎನ್‌.ರಾಜಣ್ಣ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತ್ಯುತ್ತರ ನೀಡಿದರು.

ಜೆಡಿಎಸ್‌ ಬೆಂಗಳೂರು ನಗರ ಘಟಕ ಜೆ.ಪಿ.ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜನತಾ ಮಿತ್ರ’ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಗವಂತನ ಅನುಗ್ರಹ, ದೈವಶಕ್ತಿ ನಮ್ಮ ಮೇಲೆ ಇದೆ. ಹೋರಾಟದ ಬದುಕಿನಲ್ಲಿ ಎಂದಿಗೂ ಎದೆಗುಂದಿಲ್ಲ. ಮುಂದೆಯೂ ಎದೆಗುಂದುವುದಿಲ್ಲ’ ಎಂದರು.

‘ಹಳ್ಳಿ ರೈತನ ಮಗ, ಇವನು ಸಾಧಿಸಬಲ್ಲ ಎಂದು ಹೇಳಿದ್ದ ಮಹಾನಾಯಕರೂ ಇದ್ದಾರೆ. ಪಕ್ಷವನ್ನು ಇಲ್ಲದಂತೆ ಮಾಡಬೇಕು ಎಂದು ಹೊರಟವರೂ ಇದ್ದಾರೆ. ಅದು ಆಗುವುದಿಲ್ಲ ಎಂಬುದು ಈಗ ಗೊತ್ತಾಗಿದೆ. ಕಾರ್ಯಕರ್ತರು ಆ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ’ ಎಂದು ಹೇಳಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿಗೆ ಏನೆಲ್ಲಾ ಕೊಡುಗೆ ನೀಡಿದ್ದೇನೆ ಎಂಬುದನ್ನು ಮಾತನಾಡಬಲ್ಲೆ. ವಿವರವಾಗಿ ಹೇಳುವ ಕಾಲ ಬರುತ್ತದೆ. ಆಗ ಹೇಳುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು