ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಸಿದ್ಧಪಡಿಸಿದ್ದು, ಎಂಜಿನಿ
ಯರಿಂಗ್, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು ಅಕ್ಟೋಬರ್ 4ರಿಂದ ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ವಿವರ ಹೀಗಿದೆ.

ಪದವಿ ತರಗತಿಗಳು: ಪದವಿ 5ನೇ ಸೆಮಿಸ್ಟರ್ 2021ರ ಫೆ. 28ರಂದು ಮುಗಿಯಲಿದ್ದು, ಪರೀಕ್ಷೆಗಳು ಮಾರ್ಚ್ 31ರಂದು ಮುಗಿಯಲಿವೆ. 1, 3ನೇ ಸೆಮಿಸ್ಟರ್‌ಗಳು ಮಾರ್ಚ್ 31ಕ್ಕೆ ಮುಗಿದು, ಪರೀಕ್ಷೆಗಳು ಏ.30ರಂದು ಆರಂಭವಾಗಲಿವೆ. 6ನೇ ಸೆಮಿಸ್ಟರ್ ಏ.1ರಂದು ಶುರುವಾಗಿ, ಜುಲೈ 31ಕ್ಕೆ ಮುಗಿಯುತ್ತವೆ. 6ನೇ ಸೆಮಿಸ್ಟರ್ ಪರೀಕ್ಷೆ ಆಗಸ್ಟ್ 31ಕ್ಕೆ ಮುಗಿಯಲಿದೆ.

2 ಮತ್ತು 4ನೇ ಸೆಮಿಸ್ಟರ್ ತರಗತಿಗಳು ಮೇ 2ಕ್ಕೆ ಶುರುವಾಗಿ ಆಗಸ್ಟ್ 31ಕ್ಕೆ ಮುಕ್ತಾಯವಾಗುತ್ತವೆ. ಪದವಿ 1, 3, 5ನೇ ಸೆಮಿಸ್ಟರ್‌ಗಳು ಅ. 4ಕ್ಕೆ ಆರಂಭವಾಗಿ 2022 ಜ.31ಕ್ಕೆ ಮುಗಿಯಲಿವೆ. 2, 4, 6ನೇ ಸೆಮಿಸ್ಟರ್ 2022ರ ಮಾರ್ಚ್ 1ರಿಂದ ಜೂನ್ 30ರವರೆಗೆ ನಡೆಯಲಿವೆ. ಪರೀಕ್ಷೆಗಳು 2022ರ ಜುಲೈ 31ಕ್ಕೆ ಮುಗಿಯಲಿವೆ.

ಎಂಜಿನಿಯರಿಂಗ್: ಎಂಜಿನಿಯರಿಂಗ್ ವಿಭಾಗದ 7ನೇ ಸೆಮಿಸ್ಟರ್ 2021ರ ಫೆ. 28ಕ್ಕೆ ಮುಗಿಯುತ್ತದೆ. 1, 3 ಮತ್ತು 5ನೇ ಸೆಮಿಸ್ಟರ್‌ಗಳು ಮಾರ್ಚ್ 31ಕ್ಕೆ ಮುಗಿದು, ಪರೀಕ್ಷೆಗಳು ಏಪ್ರಿಲ್ 31ಕ್ಕೆ ಅಂತ್ಯವಾಗುತ್ತವೆ. 8ನೇ ಸೆಮಿಸ್ಟರ್ ಏಪ್ರಿಲ್ 1ರಂದು ಶುರುವಾಗಿ, ಜುಲೈ 31ಕ್ಕೆ ಮುಗಿಯುತ್ತವೆ. ಪರೀಕ್ಷೆಗಳು ಆಗಸ್ಟ್ 31ಕ್ಕೆ ಮುಗಿದು ಸೆ. 10ರಂದು ಫಲಿತಾಂಶ ಪ್ರಕಟವಾಗಲಿದೆ. 2,4 ಮತ್ತು 6ನೇ ಸೆಮಿಸ್ಟರ್ ಮೇ 2ರಂದು ಆರಂಭವಾಗಿ, ಆಗಸ್ಟ್ 31ಕ್ಕೆ ಮುಗಿಯಲಿವೆ.ಎಂಜಿನಿಯರಿಂಗ್ ವಿಭಾಗದ 1,3,5,7ನೇ ಸೆಮಿಸ್ಟರ್‌ಗಳು 2021ರ ಅ. 4ರಂದು ಆರಂಭವಾಗಲಿವೆ. ಈ ತರಗತಿಗಳು ಜ. 31ಕ್ಕೆ ಅಂತ್ಯವಾಗಲಿವೆ. 2,4,6,8ನೇ ಸೆಮಿ
ಸ್ಟರ್‌ನ ತರಗತಿಗಳು ಮಾರ್ಚ್ 1ರಿಂದ ಜೂನ್ 30ರವರೆಗೆ ನಡೆಯಲಿವೆ.

ಸ್ನಾತಕೋತ್ತರ ತರಗತಿ: 3ನೇ ಸೆಮಿಸ್ಟರ್ 2021 ಫೆ. 28ಕ್ಕೆ ಮುಗಿಯಲಿದ್ದು, ಪರೀಕ್ಷೆಗಳು ಮಾರ್ಚ್ 31ಕ್ಕೆ ಅಂತ್ಯವಾಗಲಿವೆ. 1ನೇ ಸೆಮಿಸ್ಟರ್ ಏ.1ಕ್ಕೆ ಮುಗಿದು, ಪರೀಕ್ಷೆಗಳು ಮಾರ್ಚ್ 31ಕ್ಕೆ ಅಂತ್ಯವಾಗಲಿವೆ. 4ನೇ ಸೆಮಿಸ್ಟರ್ ಏ. 1ರಿಂದ ಆರಂಭವಾಗಿ ಜುಲೈ 31ಕ್ಕೆ ಮುಗಿಯಲಿವೆ. ಈ ಸೆಮಿಸ್ಟರ್‌ನ ಪರೀಕ್ಷೆಗಳು ಆಗಸ್ಟ್ 31ಕ್ಕೆ ಆರಂಭವಾಗಿ ಸೆ. 10ರಂದು ಫಲಿತಾಂಶ ಪ್ರಕಟವಾಗಲಿದೆ. 2ನೇ ಸೆಮಿಸ್ಟರ್‌ನ ತರಗತಿಗಳು ಮೇ 2ರಿಂದ ಆರಂಭವಾಗಿ ಆಗಸ್ಟ್ 31ಕ್ಕೆ ಮುಗಿಯುತ್ತವೆ.

1-3 ನೇ ಸೆಮಿಸ್ಟರ್(ಕಾಲೇಜುಗಳು) 2021 ಅ. 4ರಂದು ಆರಂಭವಾಗುತ್ತವೆ. ಈ ಮೂರು ಸೆಮಿಸ್ಟರ್‌ಗಳು 2022 ಜ. 31ಕ್ಕೆ ಅಂತ್ಯವಾಗಲಿವೆ. ಫೆ. 28ಕ್ಕೆ ಈ ಸೆಮಿಸ್ಟರ್‌ಗಳ ಪರೀಕ್ಷೆಗಳು ಮುಗಿಯಲಿವೆ. 2 ಮತ್ತು 4ನೇ ಸೆಮಿಸ್ಟರ್ ಮಾರ್ಚ್ 1ರಿಂದ ಆರಂಭ
ವಾಗಿ ಜೂನ್ 22ಕ್ಕೆ ಅಂತ್ಯವಾಗಲಿವೆ. 2ರಿಂದ 4ನೇ ಸೆಮಿಸ್ಟರ್ ಪರೀಕ್ಷೆಗಳು ಜುಲೈ 31ರಿಂದ ಶುರುವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.