ಶುಕ್ರವಾರ, ಮಾರ್ಚ್ 24, 2023
23 °C
ಪಕ್ಕದಲ್ಲಿಯೇ ಇದೆ ವರ್ತೂರು ಪ್ರಕಾಶ್‌ ಮನೆ

ಕೋಲಾರದಲ್ಲಿ ಸಿದ್ದರಾಮಯ್ಯಗೆ ಮನೆ ಸಿದ್ಧ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಸ್ಥಳೀಯವಾಗಿ ವಾಸ್ತವ್ಯಕ್ಕೆಂದು ಬೆಂಬಲಿಗರು ಮನೆಯೊಂದನ್ನು ಅಂತಿಮಗೊಳಿಸಿದ್ದಾರೆ.

‘ನಗರದ ಬೈಪಾಸ್‌ ರಸ್ತೆಯ ಬಳಿಯ ಕೋಗಿಲಹಳ್ಳಿ ಬಳಿ ಬಸವನತ್ತದಲ್ಲಿ ಮನೆ ನೋಡಿದ್ದೇವೆ. ಒಂದು ಮಹಡಿಯ ಮನೆ ಇದಾಗಿದ್ದು, ಸಿದ್ದರಾಮಯ್ಯ ಅವರ ಸಿಬ್ಬಂದಿ ವೀಕ್ಷಿಸಿದ್ದಾರೆ. ಅವರ ಒಪ್ಪಿಗೆ ಸಿಗಬೇಕಿದೆ. ಇದು ವಾಸ್ತವ್ಯಕ್ಕೆ ಮಾತ್ರ; ಕಚೇರಿಯನ್ನು ಬೇರೆ ಕಡೆ ನೋಡಲಿದ್ದೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ಎಕರೆಯ ತೋಟದ ಮನೆ ಇದಾಗಿದ್ದು, 56x46 ವಿಸ್ತೀರ್ಣ ಹೊಂದಿದೆ. ಸಿದ್ದರಾಮಯ್ಯ ಅವರ ಅಭಿಮಾನಿ ಶಂಕರ್‌ ಎಂಬುವರಿಗೆ ಸೇರಿದ ಮನೆ ಇದಾಗಿದೆ. ತಿಂಗಳ ಬಾಡಿಗೆಗೆ ನೀಡಲು ಸಮ್ಮತಿಸಿದ್ದಾರೆ ಎಂಬುದು ಗೊತ್ತಾಗಿದೆ. ಸಮೀಪದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ವರ್ತೂರು ಪ್ರಕಾಶ್‌ ಅವರ ಮನೆಯೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು