ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಸ್ವತಿಯ ನಗರಿಯಾಗಿದ್ದ ಬೆಂಗಳೂರು ಈಗ ಮಹಾಲಕ್ಷ್ಮಿಯ ನಗರಿ: ಬೊಮ್ಮಾಯಿ ಬಣ್ಣನೆ

Last Updated 18 ನವೆಂಬರ್ 2022, 15:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಹಿಂದೆ ಮಹಾಸರಸ್ವತಿಯ (ಜ್ಞಾನದ) ನಗರಿಯಾಗಿತ್ತು, ಈಗ ಮಹಾಲಕ್ಷ್ಮಿಯ (ಆರ್ಥಿಕ) ನಗರಿಯಾಗಿದೆ. ಮುಂದಿನ 5 ವರ್ಷಗಳಲ್ಲಿ ದೇಶದ ಆರ್ಥಿಕ ರಾಜಧಾನಿಯಾಗಲಿದ್ದು, ಮುಂಬೈಯನ್ನು ಹಿಂದಿಕ್ಕಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೂರು ದಿನಗಳ ಬೆಂಗಳೂರು ಟೆಕ್‌ ಸಮಿಟ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಯಶೋಗಾಥೆಗೆ ಈ ನಗರದಲ್ಲಿರುವ ಪ್ರತಿಯೊಬ್ಬ ಉದ್ಯಮಶೀಲ ವ್ಯಕ್ತಿಯ ಕೊಡುಗೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿರುವವರು ಈ ಪರಿವರ್ತನೆಗೆ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

‘ಬೆಂಗಳೂರು ಮತ್ತು ಕರ್ನಾಟಕದಲ್ಲಿ ತಯಾರಾಗುವ ಪ್ರತಿಯೊಂದು ಉತ್ಪನ್ನವೂ ಚಿನ್ನದ ಗುಣಮಟ್ಟವನ್ನು ಹೊಂದಿದೆ. ಇದರ ಹಿಂದೆ ಉದ್ಯಮಿಗಳು ಮತ್ತು ಕೌಶಲ್ಯಯುತ ಸಿಬ್ಬಂದಿಯ ಶ್ರದ್ಧೆ ಮತ್ತು ಕಠಿಣ ಪರಿಶ್ರಮವಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಂ1 ಸ್ಥಾನ ತಲುಪಲು ಕಠಿಣ ಪರಿಶ್ರಮ ಹಾಕಿದೆ. ಆ ಸ್ಥಾನವನ್ನು ಉಳಿಸಿಕೊಂಡು ಹೋಗಲು ಇನ್ನೂ ಹೆಚ್ಚಿನ ಕಠಿಣ ಪರಿಶ್ರಮ ಹಾಕಬೇಕು. ಇದು ಸರ್ಕಾರಕ್ಕೆ ಸವಾಲೂ ಆಗಿದೆ. ಈ ಪಟ್ಟವನ್ನು ಉಳಿಸಿಕೊಂಡು ಹೋಗುತ್ತೇವೆ’ ಎಂದು ಬೊಮ್ಮಾಯಿ ತಿಳಿಸಿದರು.

‘ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆ ಹಾಗೂ ನವೋದ್ಯಮಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬೆಂಗಳೂರು ಬಿಟ್ಟು ರಾಜ್ಯದ ಇತರ ನಗರಗಳೂ ಅಭಿವೃದ್ಧಿಯಾಗಬೇಕು. ಕೃಷಿ, ತಂತ್ರಜ್ಞಾನ, ಆರ್ಥಿಕತೆ ಹೀಗೆ ಎಲ್ಲ ರಂಗಗಳಲ್ಲಿಯೂ ಕರ್ನಾಟಕ ಹಾಗೂ ಬೆಂಗಳೂರು ಅತ್ಯುತ್ತಮ ಶ್ರೇಯಾಂಕ ಹೊಂದಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT