ಸೋಮವಾರ, ಸೆಪ್ಟೆಂಬರ್ 26, 2022
22 °C

ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆಚ್ಚಳ: ವೈದ್ಯಕೀಯ ತಜ್ಞರ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16ರ ಪ್ರಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣ ಶೇ 40.3 ರಷ್ಟಿತ್ತು. 2019–20ರ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ 52.5ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

ಆಸ್ತ್ರಿಕಾ ಫೌಂಡೇಷನ್ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಏರುತ್ತಿರುವ ಸಿವಿಭಾಗದ ದರಗಳು ಮತ್ತು ಸಂಭಾವ್ಯ ಪರಿಹಾರಗಳು’ ವಿಷಯದ ಬಗ್ಗೆ ತಜ್ಞರು ಚರ್ಚಿಸಿದರು. 

‘ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್‌ ಪ್ರಮಾಣ ಹೆಚ್ಚಿದೆ ಎನ್ನುವುದು ನಿಜ. ಇದರಲ್ಲಿ ವೈದ್ಯರ ಹಾಗೂ ಆಸ್ಪತ್ರೆಗಳ ಪಾತ್ರವೇನು, ತಾಯಿ ಹಾಗೂ ಅವಳ ಕುಟುಂಬದವರ ಆಸಕ್ತಿ ಎಷ್ಟು ಎನ್ನುವು ದನ್ನು ಪ್ರತ್ಯೇಕವಾಗಿ ನೋಡಬೇಕಾಗುತ್ತದೆ.  ಸಿಸೇರಿಯನ್ ತೊಡಕುಗಳ ಬಗ್ಗೆ ಗರ್ಭಿಣಿ ಮತ್ತು ಅವರ ಕುಟುಂಬಕ್ಕೆ ಮಾಹಿತಿ ಹಾಗೂ ಜ್ಞಾನವನ್ನು ನೀಡ ಬೇಕು ಎಂದು ತಜ್ಞರು ಅಭಿಮತ
ವ್ಯಕ್ತಪಡಿಸಿದರು. 


ಆಸ್ತ್ರಿಕಾ ಫೌಂಡೇಷನ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ಪಲ್ಲವಿ ಚಂದ್ರ, ಜಾನ್ಹವಿ ನಿಲೇಕಣಿ ಹಾಗೂ ಡಾ. ನಚಿಕೇತ್ ಮೋರ್ ಚರ್ಚಿಸಿದರು – ಪ್ರಜಾವಾಣಿ ಚಿತ್ರ

ಫೌಂಡೇಷನ್ ಸಂಸ್ಥಾಪಕಿ ಜಾನ್ಹವಿ ನಿಲೇಕಣಿ ಮಾತನಾಡಿದರು.

ಪ್ರಸೂತಿ ತಜ್ಞೆ ಡಾ. ಪಲ್ಲವಿ ಚಂದ್ರ, ಡಾ. ನಚಿಕೇತ್ ಮೋರ್ ಅಭಿಮತ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು