ಬೆಂಗಳೂರು: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರನ್ನು ಉತ್ತೇಜಿಸಲು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನೀಡುವ ‘ಇನ್ಫೊಸಿಸ್ ಪ್ರಶಸ್ತಿ’ ಪ್ರದಾನ ಸಮಾರಂಭ ಬುಧವಾರ ವರ್ಚುವಲ್ ರೂಪದಲ್ಲಿ ನಡೆಯಿತು.

ಆರು ವಿಭಾಗಗಳಲ್ಲಿ ಆರು ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ತಲಾ ₹70 ಲಕ್ಷ ನಗದು (1 ಲಕ್ಷ ಅಮೆರಿಕನ್ ಡಾಲರ್) ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಪ್ರಶಸ್ತಿ ವಿಜೇತರ ವಿವರ

ಪ್ರೊ.ಅರಿಂದಮ್ ಘೋಷ್: ಹೊಸ ತಲೆಮಾರಿನ ಕ್ರಿಯಾತ್ಮಕ ಎಲೆಕ್ಟ್ರಾನಿಕ್, ಥರ್ಮೊಎಲೆಕ್ಟ್ರಿಕ್ ಹಾಗೂ ಆಪ್ಟೊ ಎಲೆಕ್ಟ್ರಾನಿಕ್ ಸಾಧನಗಳನ್ನು ರೂಪಿಸಲು ಎರಡು ಆಯಾಮದ ಸೆಮಿ ಕಂಡಕ್ಟರ್ಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಪ್ರೊ. ಅರಿಂದಮ್ ಘೋಷ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಭೌತಿಕ ವಿಜ್ಞಾನ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾಗಿರುವ ಘೋಷ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರೊ. ಹರಿ ಬಾಲಕೃಷ್ಣನ್: ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಕಾರ್ಯನಿರ್ವಹಿಸುತ್ತಿರುವ ಪ್ರೊ. ಹರಿ ಬಾಲಕೃಷ್ಣನ್ ಅವರುಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಂಪ್ಯೂಟರ್ ನೆಟ್ವರ್ಕಿಂಗ್ಗೆ ನೀಡಿದ ಕೊಡುಗೆ ಮತ್ತು ಮೊಬೈಲ್ ಹಾಗೂ ವೈರ್ಲೆಸ್ ವ್ಯವಸ್ಥೆಯಲ್ಲಿ ಅವರ ಕೆಲಸವನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಚಾಲಕರ ನಡವಳಿಕೆಯನ್ನು ನಿಯಂತ್ರಿಸುವ ಮೂಲಕ ಹೆಚ್ಚು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವ ‘ಮೊಬೈಲ್ ಟೆಲಿಮ್ಯಾಟಿಕ್ಸ್’ ಅಪ್ಲಿಕೇಶನ್ ಅನ್ನು ಇವರು ಅಭಿವೃದ್ಧಿ ಪಡಿಸಿದ್ದಾರೆ.

ಡಾ. ಪ್ರಾಚಿ ದೇಶಪಾಂಡೆ: ಮಾನವೀಯ ವಿಭಾಗದಲ್ಲಿ ಕೋಲ್ಕತ್ತದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಷಿಯಲ್ ಸೈನ್ಸ್ (ಸಿಎಸ್ಎಸ್ಎಸ್)ನ ಸಾಮಾಜಿಕ ವಿಜ್ಞಾನ ವಿಭಾಗದ ಡಾ. ಪ್ರಾಚಿ ದೇಶಪಾಂಡೆಯವರಿಗೆ, ದಕ್ಷಿಣ ಏಷ್ಯಾದ ಇತಿಹಾಸ ವಿಷಯದಲ್ಲಿ ನಡೆಸಿದ ಸೂಕ್ಷ್ಮ ಮತ್ತು ಆಧುನಿಕ ಸಂಶೋಧನೆ ಪರಿಗಣಿಸಿ ಈ ಗೌರವ ನೀಡಲಾಗಿದೆ. ಮರಾಠರ ಇತಿಹಾಸ ರಚನೆಯಲ್ಲಿ ಅವರು ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠ ಕಾಲದಿಂದ ಆಧುನಿಕ ಇತಿಹಾಸದವರೆಗಿನ ವಿಕಾಸದ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.

ಡಾ.ರಾಜನ್ ಶಂಕರನಾರಾಯಣನ್: ಹೈದರಾಬಾದ್ನ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಕೇಂದ್ರದ ಡಾ. ರಾಜನ್ ಶಂಕರನಾರಾಯಣನ್ ಅವರು, ಜೀವವಿಜ್ಞಾನದ ಮೂಲಭೂತ ಅಂಶವಾದ ಅಣುಗಳ ಆನುವಂಶಿಕ ಸಂಕೇತಗಳ ದೋಷಮುಕ್ತ ವರ್ಗಾವಣೆ ವಿಷಯದಲ್ಲಿ ಕೈಗೊಂಡ ಸಂಶೋಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರತಿ ಜೀವಕಗಳು ಹಾಗೂ ರೋಗನಿರೋಧಕ ಔಷಧದ ಸಂಭಾವ್ಯ ಅನ್ವಯಿಕಗಳ ಕುರಿತ ಸಂಶೋಧನೆಯಲ್ಲಿ ರಾಜನ್ ನಿರತರಾಗಿದ್ದಾರೆ.

ಪ್ರೊ. ಸೌರವ್ ಚಟರ್ಜಿ: ಗಣಿತ ವಿಜ್ಞಾನ ಕ್ಷೇತ್ರದಲ್ಲಿ ರಾಂಡಮ್ ಗ್ರಾಫ್ಗಳ ವಿಚಲನಗಳ ಕುರಿತು ಮಾಡಿದ ಕೆಲಸ ಪರಿಗಣಿಸಿ ಪ್ರೊ. ಸೌರವ್ ಚಟರ್ಜಿಯವರಿಗೆ ಈ ಗೌರವ ನೀಡಲಾಗಿದೆ. ಚಟರ್ಜಿಯವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರೊ.ರಾಜ್ ಚೆಟ್ಟಿ: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ರಾಜ್ ಚೆಟ್ಟಿಯವರಿಗೆ ಸಮಾಜ ವಿಜ್ಞಾನ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಆರ್ಥಿಕವಾಗಿ ಮುಂದುವರಿಯಲು ಜನರಿಗೆ ಎದುರಾಗುವ ಅಡ್ಡಿ–ಆತಂಕಗಳು ಹಾಗೂ ಬಡತನದಿಂದ ಹೊರಬರಲು ಬೇಕಾದ ಪರಿಹಾರ ಮಾರ್ಗಗಳ ಕುರಿತು ಚೆಟ್ಟಿ ಅಧ್ಯಯನ ನಡೆಸಿದ್ದಾರೆ. ಕೋವಿಡ್ ಬಿಕ್ಕಟ್ಟು ಆರ್ಥಿಕವಾಗಿ ಯಾವ ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂಬ ಬಗ್ಗೆಯೂ ದತ್ತಾಂಶ ಸಂಗ್ರಹಿಸಿ, ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ.

‘ಭಾರತ ಪುಟಿದೇಳಲಿದೆ’

‘ಕೋವಿಡ್ ಬಿಕ್ಕಟ್ಟಿನ ನಡುವೆಯೂ ಭಾರತದ ಭವಿಷ್ಯ ಉಜ್ವಲವಾಗಿದೆ. ಸದ್ಯ ದೇಶದ ವೃದ್ಧಿ ದರ ಶೇ 5, ಶೇ 6ರಷ್ಟಾಗಿರಬಹುದು. ಆದರೆ, ಕೆಲವೇ ವರ್ಷಗಳಲ್ಲಿ ಶೇ 9ಕ್ಕಿಂತ ಹೆಚ್ಚಾಗಲಿದೆ’ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಮುಖ್ಯಸ್ಥ ಎನ್.ಆರ್. ನಾರಾಯಣಮೂರ್ತಿ ಹೇಳಿದರು.

‘30 ವರ್ಷಗಳ ಹಿಂದೆ ಶೇ 2 ಮತ್ತು ಶೇ 3ರಷ್ಟಿದ್ದಾಗಲೂ ಖುಷಿಯಾಗಿದ್ದೆವು. ಈಗಿನ ಬಿಕ್ಕಟ್ಟಿನಿಂದ ದೇಶ ಆದಷ್ಟು ಬೇಗ ಹೊರಬರಲಿದ್ದು, ಹೊಸ ಯುಗ ಆರಂಭವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಜಾಗತಿಕ ತಾಪಮಾನ, ನೀರಿನ ಸಮಸ್ಯೆ, ಆರ್ಥಿಕ ಬಿಕ್ಕಟ್ಟು ಸಾಂಕ್ರಾಮಿಕ ಕಾಯಿಲೆಯಂತಹ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ತಜ್ಞರ ಅವಶ್ಯಕತೆ ಇದೆ. ಇಂತಹ ತಜ್ಞರನ್ನು ಉತ್ತೇಜಿಸುವ, ಅವರಿಗೆ ಎಲ್ಲ ವ್ಯವಸ್ಥೆ ಕಲ್ಪಿಸುವ ಕೆಲಸವಾಗಬೇಕು. ಈ ಉದ್ದೇಶದ ಈಡೇರಿಕೆಗಾಗಿಯೂ ಇನ್ಫೊಸಿಸ್ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುತ್ತಿದೆ. 12 ವರ್ಷಗಳಲ್ಲಿ ಈ ಪ್ರಶಸ್ತಿಗೆ ಪಾತ್ರರಾದ ಅನೇಕರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.