ಶನಿವಾರ, ಜನವರಿ 28, 2023
15 °C

ಗಂಗಾವತಿಯಿಂದ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಖರೀದಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಇಲ್ಲಿಂದಲೇ ಸ್ಪರ್ಧಿಸುವರು’ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಬಹುಕೋಟಿ ಗಣಿ ಹಗರಣದ ಆರೋಪದಲ್ಲಿ ಬಂಧಿತರಾಗಿದ್ದ ರೆಡ್ಡಿ ಅವರಿಗೆ ಷರತ್ತುಗಳ ಅನ್ವಯ 2015ರಲ್ಲಿ ಜಾಮೀನು ನೀಡಿದ ಸುಪ್ರೀಂ ಕೋರ್ಟ್, ‘ಕರ್ನಾಟಕದ ಬಳ್ಳಾರಿ, ಆಂಧ್ರ ಪ್ರದೇಶದ ಕಡಪ, ಅನಂತಪುರಕ್ಕೆ ಭೇಟಿ ನೀಡಬಾರದು’ ಎಂಬ ಷರತ್ತು ವಿಧಿಸಿದೆ.

ಸಚಿವ ಶ್ರೀರಾಮುಲು ಬೆಂಬಲದಿಂದ ರಾಜಕೀಯ ಪ್ರವೇಶಿಸಿ, ಮತ್ತೆ ನೆಲೆ ಕಂಡುಕೊಳ್ಳಲು ಬಯಸಿರುವ ರೆಡ್ಡಿ ಅವರಿಗೆ ಬಿಜೆಪಿಯ ಭಿನ್ನ ನಿಲುವು ಅಡ್ಡಿಯಾಗಿದೆ. ಆದ್ದರಿಂದ ಕೆಲ ದಿನಗಳ ಹಿಂದೆ ರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಸದ್ಯಕ್ಕೆ ರಾಜಕೀಯದ ಮಾತು ಬೇಡ. ಭತ್ತದನಾಡು ಗಂಗಾವತಿಯಲ್ಲೇ ವಾಸವಿರಲು ಮನೆ ಖರೀದಿಸಿದ್ದೇನೆ. ಡಿಸೆಂಬರ್ ಅಂತ್ಯದಲ್ಲಿ ವಿಶೇಷ ಪೂಜೆನಡೆಸಿ, ಗೃಹ ಪ್ರವೇಶ ಮಾಡಲಾಗು ವುದು’ ಎಂದು ಜನಾರ್ದನ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು. ಗಂಗಾವತಿಯಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು