ಮಂಗಳವಾರ, ಸೆಪ್ಟೆಂಬರ್ 21, 2021
20 °C

ಉದ್ಯೋಗ ಸೃಷ್ಟಿಗಲ್ಲ, ಕೌಶಲ ತರಬೇತಿಗೆ ಒತ್ತು: ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಉದ್ಯೋಗ ಸೃಷ್ಟಿಗಿಂತಲೂ, ಬೇಡಿಕೆ ಆಧಾರಿತ ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗು ತ್ತಿದೆ’ ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಕೇಳಿದ ಪ್ರಶ್ನೆಗೆ ಅವರು, ‘ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ನಿರೀಕ್ಷೆಯಂತೆ ಕೌಶಲ ತರಬೇತಿ ನೀಡಲು ಸಾಧ್ಯ ಆಗಿಲ್ಲ. ಜೊತೆಗೆ, ಆರ್ಥಿಕ ಚಟುವಟಿಕೆಯೂ ಕುಂಠಿತಗೊಂಡಿದೆ’ ಎಂದರು.

‘ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಉದ್ಯೋಗ ಸೃಷ್ಟಿಯ ಶೇಕಡಾವಾರು ಪ್ರಮಾಣದಲ್ಲಿ ಬೆಂಗಳೂರಿಗಿಂತ ಪುಣೆ ಮತ್ತು ಹೈದರಾಬಾದ್‌ ಬಹಳ ಮುಂದಿದೆ. ಶೇ 4ರಷ್ಟು ಮಂದಿ ಮಾತ್ರ ಬೆಂಗಳೂರಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಉದ್ಯೋಗ ಸೃಷ್ಟಿ ವಿಷಯದಲ್ಲಿ ಬೆಂಗ ಳೂರು ನಗರ ಹಿಂದುಳಿದಿದೆ’ ಎಂದರು.

‘ಉದ್ಯೋಗ ಸೃಷ್ಟಿಗೆ ಸರ್ಕಾರ ಆಸಕ್ತಿ ವಹಿಸದೇ ಇದ್ದರೆ, ಕೌಶಲ ತರಬೇತಿ ನೀಡುವ ಅಗತ್ಯವಾದರೂ ಏನು’ ಎಂದು ಹರಿಪ್ರಸಾದ್‌ ಪ್ರಶ್ನಿಸಿದರು.

‘ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ ಮೂಲಕ ತರಬೇತಿ ಮತ್ತು ನೇಮಕಾತಿ ನಡುವಿನ ಅಂತರ ಕಡಿಮೆ ಮಾಡಲಾಗುವುದು. ಆ ಮೂಲಕ, ನೇಮಕಾತಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು’ ಎಂದರು.

‘ಇಲಾಖೆಯ ಮೂಲಕ 492 ಉದ್ಯೋಗ ಮೇಳಗಳ ಮೂಲಕ 65,583 ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ’ ಎಂದೂ ಸಚಿವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು