ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿಗೆ ಜನರಿಂದಲೇ ಆಯ್ಕೆ: ಸಚಿವ ಸುನೀಲ್ ಕುಮಾರ್

ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿಕೆ *ರಂಗಾಯಣ ನಾಟಕ ತಿರುಗಾಟಕ್ಕೆ ಚಾಲನೆ
Last Updated 18 ಆಗಸ್ಟ್ 2022, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ. ಆಯ್ಕೆ ಸಮಿತಿಯ ಸದಸ್ಯರು ರಾಜ್ಯದಾದ್ಯಂತ ಸಂಚರಿಸಿ, ಜನರ ಸಲಹೆ ಅನುಸಾರ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿರುವ ‘ರಂಗಾಯಣ ನಾಟಕ ತಿರುಗಾಟಕ್ಕೆ’ ನಗರದಲ್ಲಿ ಗುರುವಾರ ಚಾಲನೆ ನೀಡಿ, ಮಾತನಾಡಿದರು. ‘ಈ ಬಾರಿ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಈಗಿನಿಂದಲೇ ತಯಾರಿ ಪ್ರಾರಂಭಿಸಲಾಗಿದೆ. ‘ಪದ್ಮ ಪ್ರಶಸ್ತಿ’ಗೆ ಸಾಧಕರನ್ನು ಆಯ್ಕೆ ಮಾಡಿದ ಮಾದರಿಯಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿಗೂ ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿ, ಗೌರವಿಸಲಾಗುತ್ತದೆ. ಆಯ್ಕೆ ಸಮಿತಿಯನ್ನು ಆದಷ್ಟು ಬೇಗ ರಚನೆ ಮಾಡಲಾಗುವುದು’ ಎಂದು ಹೇಳಿದರು.

‘ಹರ್ ಘರ್ ತಿರಂಗಾ ಅಭಿಯಾನದಿಂದರಾಷ್ಟೀಯ ಪ್ರಜ್ಞೆ ಪ್ರಕಟವಾಗಿದೆ.ಕರ್ನಾಟಕದ ಹೋರಾಟದ ಬಗ್ಗೆ ರಂಗಾಯಣ ಕಲಾವಿದರು ನಾಲ್ಕು ನಾಟಕಗಳನ್ನು ಹೊರ ತಂದಿದ್ದಾರೆ. ಮನಸ್ಸನ್ನು ಪರಿವರ್ತಿಸುವ ಶಕ್ತಿ ನಾಟಕಕ್ಕಿದೆ. ‘ಸತ್ಯ ಹರಿಶ್ಚಂದ್ರ’ ನಾಟಕ ನೋಡಿದ ಬಳಿಕ ಗಾಂಧೀಜಿ, ಸುಳ್ಳು ಹೇಳಬಾರದು ಎಂದು ನಿರ್ಧರಿಸಿ, ಮನಃ ಪರಿವರ್ತನೆ ಮಾಡಿಕೊಂಡಿದ್ದರು. ವಿವಿಧ ಸಂಘ–ಸಂಸ್ಥೆಗಳ ನೆರವಿನಿಂದ ವರ್ಷಾಂತ್ಯದವರೆಗೂ ನಾಡಿನ ಹೋರಾಟ ನೆನಪಿಸುವ ನಾಟಕಗಳನ್ನು ಪ್ರದರ್ಶಿಸುವ ಯೋಚನೆಯಿದೆ’ ಎಂದರು.

‘ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವವಿಧಾನಸಭೆ ಅಧಿವೇಶನದಲ್ಲಿ ಶಾಸಕರಿಗೆ ರಂಗಾಯಣ ಪ್ರಸ್ತುತಪಡಿಸಿರುವ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ’ ಎಂದು ಹೇಳಿದರು.

ಶಿವಮೊಗ್ಗ ರಂಗಾಯಣದ ನಿರ್ದೇಶಕಸಂದೇಶ್ ಜವಳಿ, ‘ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ಸಿದ್ಧಪಡಿಸಲಾದ ನಾಟಕಗಳನ್ನು ಇದೇ 30ರವರೆಗೂ ರಾಜ್ಯದ ವಿವಿಧೆಡೆ ಪ್ರದರ್ಶಿಸಲಾಗುತ್ತದೆ’ ಎಂದರು.

ಮೈಸೂರು ರಂಗಾಯಣದ ಕಲಾವಿದರು ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದ ‘ಹಲಗಲಿ ಸಮರ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT