ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಅಸ್ಮಿತೆಯ ಬಗ್ಗೆ ಅಗೌರವ ಹುಟ್ಟಿಸುವ ಪಠ್ಯ ರೂಪಿಸಲಾಗಿದೆ: ಕಾಂಗ್ರೆಸ್

ಅಕ್ಷರ ಗಾತ್ರ

ಬೆಂಗಳೂರು: ‍ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ಮುಂದುವರಿಸಿದೆ.

‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಪ್ರಾದೇಶಿಕ ಅಸ್ಮಿತೆಯ ಬಗ್ಗೆ ಮಕ್ಕಳಲ್ಲಿ ಅಪನಂಬಿಕೆ, ಅಗೌರವ ಹುಟ್ಟಿಸುವಂತಹ ಪಠ್ಯ ಕ್ರಮ ರೂಪಿಸಲಾಗಿದೆ’ ಎಂದು ಟೀಕಿಸಿದೆ.

‘ಇದು ಸಂವಿಧಾನದ, ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿರುವಂತದ್ದು. ಜಾತ್ಯತೀತ ತತ್ವಗಳನ್ನು ಮರೆಮಾಚುವ ಹಾಗೂ ಕಂದಾಚಾರಗಳನ್ನು ಪುಷ್ಠಿಕರಿಸುವ ಆರ್‌ಎಸ್‌ಎಸ್‌ ಪ್ರಣೀತ ಪಠ್ಯದಿಂದ ಮುಂದಿನ ತಲೆಮಾರು ವೈಚಾರಿಕತೆಯನ್ನು ಕಳೆದುಕೊಳ್ಳಲಿದೆ’ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

‘ಪರಿಷ್ಕರಣೆಯ ಪಠ್ಯವನ್ನು ಪ್ರಶ್ನಿಸಿದಾಗ ಇನ್ನೂ ಪಠ್ಯ ಪುಸ್ತಕ ಪ್ರಿಂಟ್ ಆಗಿಲ್ಲ, ಅಂತಿಮ ಕಾಪಿ ಬಂದಾಗ ನೋಡಿ ಎನ್ನುತ್ತಾರೆ. ಪಠ್ಯ ಪುಸ್ತಕ ವಿತರಣೆಯ ವಿಳಂಬ ಪ್ರಶ್ನಿಸಿದಾಗ ಪ್ರಿಂಟ್ ಆಗುತ್ತಿದೆ ಎನ್ನುತ್ತಾರೆ. ವರದಿಗಳು ಪುಸ್ತಕ ಪ್ರಿಂಟ್‌ಗೆ ಟೆಂಡರ್ ಆಗಿಲ್ಲ ಎನ್ನುತ್ತವೆ. ಬಿಜೆಪಿಯ ಸುಳ್ಳರ ಸಾಮ್ರಾಜ್ಯ ಸತ್ಯವನ್ನೇ ಒದ್ದೋಡಿಸುತ್ತಿದೆ’ ಎಂದೂ ಕಾಂಗ್ರೆಸ್‌ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT