ಬುಧವಾರ, ಆಗಸ್ಟ್ 17, 2022
23 °C

ಕುರ್ಚಿಗಾಗಿ ಯಡಿಯೂರಪ್ಪ ಹೋರಾಟ, ಕಂಗೆಟ್ಟ ರೈತರು: ಕಾಂಗ್ರೆಸ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದ್ದು, ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿಗಾಗಿ ಹೋರಾಡುತ್ತಿದ್ದಾರೆ. ಅತ್ತ ಭಾರಿ ಮಳೆಯಿಂದಾಗಿ ಬೆಳೆ ನಾಶವಾಗಿ ರೈತರು ಕಂಗೆಟ್ಟಿದ್ದಾರೆ ಎಂದು ಆರೋಪಿಸಿದೆ. 

ಈ ಕುರಿತು ಟ್ವೀಟ್ ಮಾಡಿದ್ದು, 'ಭಾರಿ ಮಳೆಯಿಂದ ಬೆಳೆ ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಈಗಾಗಲೇ ಪ್ರವಾಹ ಮತ್ತು ಲಾಕ್‌ಡೌನ್‌ ನಷ್ಟದಿಂದ ಕಂಗಾಲಾದ ರೈತರಿಗೆ ಧೈರ್ಯ ತುಂಬುವ ಯೋಜನೆಯನ್ನು ರೂಪಿಸಿಲ್ಲ ಸರ್ಕಾರ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿಗಾಗಿ ಹೋರಾಡುತ್ತಿದ್ದಾರೆ. ಕೃಷಿ ಸಚಿವ ಬಿ.ಎಸ್. ಪಾಟೀಲ್ ನಾಪತ್ತೆಯಾಗಿದ್ದಾರೆ! ರೈತರನ್ನ ಕೇಳುವವರಾರು?' ಎಂದು ಪ್ರಶ್ನಿಸಿದೆ. 

ಇದನ್ನೂ ಓದಿ: 

ಈ ಮೊದಲು ಬಿ.ಎಸ್. ಯಡಿಯೂರಪ್ಪ ಅವರ ದೆಹಲಿ ಭೇಟಿಯನ್ನು ಕಾಂಗ್ರೆಸ್ ಟೀಕೆಗೈದಿತ್ತು. 

ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಲಸಿಕೆ ಕೊರತೆ ನೀಗಿಸಲು ತೆರಳಿದ್ದಾರೆಯೇ?  ರಾಜ್ಯಕ್ಕೆ ಬರಬೇಕಿದ್ದ GST ಕೇಳಲು ಹೋಗಿದ್ದಾ? ನೆರೆ ಪರಿಹಾರದ ಬಾಕಿ ಕೇಳಲು ಹೋಗಿದ್ದೇ? 3ನೇ ಅಲೆ ಎದುರಿಸಲು ನೆರವಿನ ಪ್ಯಾಕೇಜ್ ತರಲು ಹೋಗಿದ್ದಾರೆಯೇ? ಅಥವಾ ಸಿಎಂ ಕುರ್ಚಿ ಭದ್ರಪಡಿಸಲು ಹೋಗಿದ್ದಾರೆಯೇ ಎಂದು ಟೀಕಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು