ಗುರುವಾರ , ಮಾರ್ಚ್ 30, 2023
32 °C

ರಾಜ್ಯದಲ್ಲಿನ್ನು ನೈಟ್‌ ಕರ್ಫ್ಯೂ ಕೂಡ ಇಲ್ಲ, ಕುದುರೆ ರೇಸ್‌ಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PTI Photo

ಬೆಂಗಳೂರು: ಕೋವಿಡ್‌ 19 ಸೋಂಕು ತಡೆ ಹಿನ್ನೆಲೆ ರಾಜ್ಯದಲ್ಲಿ ಹೇರಲಾಗಿದ್ದ ನೈಟ್‌ ಕರ್ಪ್ಯೂ ಆದೇಶವನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ. 

ರಾಜ್ಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನಿಷೇಧ ಜಾರಿಯಲ್ಲಿತ್ತು. ಅಕ್ಟೋಬರ್‌ 25ಕ್ಕೆ ನೈಟ್‌ ಕರ್ಫ್ಯೂಗೆ ಸಂಬಂಧಿಸಿ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ನೈಟ್‌ ಕರ್ಫ್ಯೂವನ್ನು ಸಂಪೂರ್ಣವಾಗಿ ತೆಗೆದು ಹಾಕಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್‌ ನೂತನ ಆದೇಶ ಹೊರಡಿಸಿದ್ದಾರೆ.

ಅಕ್ಟೋಬರ್‌ 25ಕ್ಕೆ ನೈಟ್‌ ಕರ್ಫ್ಯೂವನ್ನು ಮುಂದುವರಿಸಿರುವ ಆದೇಶವನ್ನು ಪ್ರಕಟಿಸಲಾಗಿತ್ತು. ಇದು ಜನರಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟುಮಾಡಿತ್ತು. ರಾತ್ರಿ ಕರ್ಫ್ಯೂ ಅಗತ್ಯತೆ ಬಗ್ಗೆಯೂ ಪ್ರಶ್ನೆಗಳು ಕೇಳಿಬಂದಿದ್ದವು. ಇದೀಗ 10 ದಿನಗಳ ಬಳಿಕ ರಾತ್ರಿ ಕರ್ಫ್ಯೂವನ್ನು ತೆಗೆದು ಹಾಕಲಾಗಿದೆ.

ಕುದುರೆ ರೇಸ್‌ಗೆ ಅನುಮತಿ
ಈ ನಡುವೆ ಕುದುರೆ ರೇಸ್‌ಗೆ ಅನುಮತಿ ನೀಡಲಾಗಿದೆ. ಕುದುರೆ ರೇಸ್‌ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿರುವುದು ಕಡ್ಡಾಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗುರುವಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 261 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಐವರು ಕೋವಿಡ್‌ ಕಾರಣದಿಂದ ಮೃತರಾಗಿದ್ದಾರೆ. ಒಟ್ಟಾರೆ ಇದುವರೆಗೆ 29,89,275 ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು 38,095 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು