ಗುರುವಾರ , ಡಿಸೆಂಬರ್ 1, 2022
27 °C

ಭ್ರಷ್ಟಾಚಾರ ರಹಿತವಾಗಿ ಬದುಕುವುದು ಅಷ್ಟೊಂದು ಸುಲಭವಲ್ಲ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭ್ರಷ್ಟಾಚಾರದ ಮೂಲವೇ ಆಲೋಚನೆ. ಕ್ರಿಯೆ ನಮ್ಮನ್ನು ಭ್ರಷ್ಟರನ್ನಾಗಿ ಮಾಡಿದೆ. ಇದಕ್ಕೆ ಒತ್ತಡಗಳೂ ಕಾರಣ ಆಗಬಹುದು. ಭ್ರಷ್ಟಾಚಾರ ರಹಿತವಾಗಿ ಬದುಕುವುದು ಅಷ್ಟೊಂದು ಸುಲಭವಲ್ಲ. ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪರೋಕ್ಷವಾಗಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾವು (ರಾಜಕಾರಣಿ) ಕೆಡುತ್ತಿಲ್ಲ; ವ್ಯವಸ್ಥೆ ನಮ್ಮನ್ನು ಕೆಡಿಸುತ್ತಿದೆ. ವ್ಯವಸ್ಥೆ ಕೆಡಬಾರದೆಂದು ನೀವು (ಮತದಾರ) ಮನಸ್ಸು ಮಾಡಿದರೆ ನಾವು ಕೆಡಬೇಕಾದ ಅಗತ್ಯವಿಲ್ಲ. ಸ್ವಂತಕ್ಕೆ ಒಂದಷ್ಟು ಜಾಸ್ತಿ ಬೇಕು ಎಂಬ ಆಲೋಚನೆ ಬರುವುದು ಸಹಜ. ಇಂತಹ ಮನಸ್ಥಿತಿಗೆ ನಮ್ಮನ್ನು ತಳ್ಳಬೇಡಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು