ಎಲ್ಲಾ ಭಯೋತ್ಪಾದಕರನ್ನು ವಿರೋಧಿಸುತ್ತೇವೆ ಎಂದು ತಾವು ಹೇಳುತ್ತಿದ್ದೀರಿ @siddaramaiahನವರೆ. ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಭಯೋತ್ಪಾದನೆಗೆ ಪ್ರಾಣ ತೆತ್ತರು ಎಂದೂ ಹೇಳುತ್ತಿದ್ದೀರಿ. ಆದರೆ ಅವರನ್ನು ಬಲಿಪಡೆದ ಭಯೋತ್ಪಾದನೆಗೆ ಚಾಲನೆ ನೀಡಿದ್ದು ಯಾರು? ಯಾವ ಉದ್ದೇಶಕ್ಕೆ?
ತಾನೇ ಭಿಂದ್ರನ್ವಾಲೆಯನ್ನು ಪೋಷಿಸಿ ನಂತರ ತಾನೇ ಸಂಹರಿಸಿದ ಇಂದಿರಾ ಗಾಂಧಿ ನಡೆಯ ಬಗ್ಗೆ ಸಿಖ್ ಜನಾಂಗದ ವಲಯದಲ್ಲಿ ವಿರೋಧವಿತ್ತು. ಆ ವಿರೋಧದ ಪರಾಕಾಷ್ಟೆಗೆ ಅವರು ಬಲಿಯಾದರು. ಆದರೆ ನಂತರ ಸಾವಿರಾರು ಜನರ ಪ್ರಾಣ ತೆಗೆದ ಸಿಖ್ ಮಾರಣಹೋಮದ ಸೂತ್ರಧಾರಿಗಳು ಯಾರು @siddaramaiah?
ಬಂಡುಕೋರರನ್ನು ಬೆಳೆಸುವ ಮೂಲಕ ನೆರೆದೇಶಗಳ ಮೇಲೆ ನಿಯಂತ್ರಣ ಸಾಧಿಸುವುದು ಇಂದಿರಾ ಗಾಂಧಿಯವರ ಸೂತ್ರ. ಎಲ್‌ಟಿಟಿಇ ಸಕ್ರಿಯವಾಗಿದ್ದರೆ ಶ್ರೀಲಂಕಾವನ್ನು ನಿಯಂತ್ರಿಸಲು ಸುಲಭ ಎಂಬುದು ಅವರ ಲೆಕ್ಕಾಚಾರ. ಹಾಗಾಗಿ ಎಲ್‌ಟಿಟಿಇ ಸಂಘಟನೆಯನ್ನು ಭಾರತದ ಒಳಕ್ಕೇ ಕರೆಸಿ ಶಸ್ತ್ರಾಸ್ತ್ರ ಪೂರೈಸಿ ತರಬೇತಿ ಕೊಡಿಸಿದರು.
ಆದರೆ ಆ ರೀತಿ ಇದ್ದ ಸಂಬಂಧವನ್ನು ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು ಎಂಬುದು ಎಲ್‌ಟಿಟಿಇಗೆ ಅವರ ಮೇಲೆ ಇದ್ದ ಕೋಪ. ಶ್ರೀಲಂಕಾಗೆ ಶಾಂತಿ ಪಾಲನಾ ಪಡೆ ಕಳುಹಿಸಿ ಭಾರತದ ಗುಪ್ತಚರ ಸಂಸ್ಥೆ ಜತೆ ಭಾರತೀಯ ಸೇನೆಯನ್ನೇ ಯುದ್ಧಕ್ಕಿಳಿಸಿದ್ದು ರಾಜೀವ್ ಗಾಂಧಿಯವರು.