ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಾನಂದ ಸಾಲಿ, ಚೈತ್ರಾ, ಸಿದ್ದುಗೆ ಸಾಹಿತ್ಯ ಪ್ರಶಸ್ತಿ

Last Updated 21 ಫೆಬ್ರವರಿ 2023, 22:01 IST
ಅಕ್ಷರ ಗಾತ್ರ

ಮಾನ್ವಿ (ರಾಯಚೂರು ಜಿಲ್ಲೆ): ಪಟ್ಟಣದ ಪ್ರಾರ್ಥನಾ ದತ್ತಿ ಸಂಸ್ಥೆಯ 2022ನೇ ಸಾಲಿನ ರಾಜ್ಯಮಟ್ಟದ ಸಾಹಿತ್ಯ ಪುರಸ್ಕಾರಕ್ಕೆ ಸಾಹಿತಿ ಚಿದಾನಂದ ಸಾಲಿ, ಕವಿಗಳಾದ ಚೈತ್ರಾ ಶಿವಯೋಗಿಮಠ ಹಾಗೂ ಸಿದ್ದು ಸತ್ಯಣ್ಣವರ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಕಥಾ ಸಂಕಲನ ಪ್ರಶಸ್ತಿಗೆ ಚಿದಾನಂದ ಸಾಲಿ ಅವರ ‘ಹೊಗೆಯ ಹೊಳೆಯಿದು ತಿಳಿಯದು’ ಕೃತಿ, ಅತ್ಯುತ್ತಮ ಕವನ ಸಂಕಲನ ಪ್ರಶಸ್ತಿಗೆ ಚೈತ್ರಾ ಶಿವಯೋಗಿಮಠ ಅವರ ‘ಪೆಟ್ರಿಕೋರ್’ ಮತ್ತು ಸಿದ್ದು ಸತ್ಯಣ್ಣನವರ ಅವರ ‘ಗಾಳಿಯ ಮಡಿಲು’ ಕೃತಿಗಳು ಆಯ್ಕೆಯಾಗಿದೆ.

ಕಥಾ ವಿಭಾಗದಲ್ಲಿ ಸಾಹಿತಿ ಜಿ.ಪಿ.ಬಸವರಾಜು, ಕತೆಗಾರ ಟಿ.ಎಸ್.ಗೊರವರ ಹಾಗೂ ಕಾವ್ಯ ವಿಭಾಗದಲ್ಲಿ ಸಾಹಿತಿಗಳಾದ ವಿಕ್ರಮ್ ವಿಸಾಜಿ ಹಾಗೂ ಸಬಿತಾ ಬನ್ನಾಡಿ ತೀರ್ಪುಗಾರರಾಗಿದ್ದರು.

‘ಮಾರ್ಚ್ ತಿಂಗಳಲ್ಲಿ ಮಾನ್ವಿಯಲ್ಲಿ ಪ್ರಶಸ್ತಿ ಪ್ರದಾನ ಸಮಾಂಭ ನಡೆಯಲಿದೆ. ಸಾಲಿ ಅವರಿಗೆ ₹10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ, ಚೈತ್ರಾ ಶಿವಯೋಗಿಮಠ ಹಾಗೂ ಸಿದ್ದು ಸತ್ಯಣ್ಣನವರ ಅವರಿಗೆ ತಲಾ ₹5 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಬೊಮ್ಮನಹಾಳ
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT