ಬುಧವಾರ, ಸೆಪ್ಟೆಂಬರ್ 29, 2021
20 °C

ಕೆಎಎಸ್‌ ಅಧಿಕಾರಿ ಪತಿ ಕೋವಿಡ್‌ನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮದುವೆಯ ನಂತರ ಪತ್ನಿಯನ್ನು ಓದಿಸಿ, ಅವರ ಕೆಎಎಸ್‌ ಕನಸಿಗೆ ನೀರೆರೆದಿದ್ದ ಪತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನಗರದ ಕಾಮಾಕ್ಷಿ ಬೀದಿಯ ಎಲ್‌.ಶ್ರೀನಿವಾಸ್‌ (45) ಮೃತಪಟ್ಟವರು.

ಇವರು ಅಕ್ಕನ ಮಗಳನ್ನೇ ಮದುವೆಯಾಗಿದ್ದರು. ತಮ್ಮ ಸಾಧುಶೆಟ್ಟಿ ಸಮಾಜದಲ್ಲಿ ಹೆಣ್ಣುಮಕ್ಕಳು ಓದುವುದಿಲ್ಲ ಎಂಬ ಆಪಾದನೆಯಿಂದ ಮುಕ್ತವಾಗಬೇಕು ಎಂದು ಪತ್ನಿ ಅಶ್ವಿನಿಗೆ ಓದಲು ಪ್ರೇರಣೆ ನೀಡಿದ್ದರು. ಪತಿಯ ನಿರೀಕ್ಷೆ ಹುಸಿಗೊಳಿಸದ ಅಶ್ವಿನಿ ಪದವಿ ನಂತರ ಕೆಎಎಸ್‌ ತೇರ್ಗಡೆಯಾಗಿದ್ದರು. ಪ್ರಸ್ತುತ ತುಮಕೂರಿನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ತಹಶೀಲ್ದಾರ್ ಹುದ್ದೆ ಪೂರ್ಣಪ್ರಮಾಣದಲ್ಲಿ ದೊರಕುವ ಮೊದಲೇ ಪತಿ ಶ್ರೀನಿವಾಸ್‌ ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಶ್ರೀನಿವಾಸ್‌ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು