ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತುಕೊಂಡರೆ ಹಿಜಾಬ್‌ ಪರ, ಹೇರಿದರೆ ವಿರುದ್ಧ: ಶಾಸಕಿ ಡಾ. ಅಂಜಲಿ ನಿಂಬಾಳ್ಕರ್‌

Last Updated 15 ಫೆಬ್ರುವರಿ 2022, 7:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿರುವ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವ ವಿಚಾರಕ್ಕೆ ಸಂಬಂಧಿಸಿ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್‌ ಟ್ವೀಟ್‌ ಮಾಡಿದ್ದಾರೆ.

'ನನ್ನ ಹಿಜಾಬ್‌ ಅನ್ನು ಕಿತ್ತುಕೊಂಡರೆ; ನಾನು ಹಿಜಾಬ್‌ ಪರವಾಗಿ ಇದ್ದೇನೆ. ನನ್ನ ಮೇಲೆ ಬಲವಂತವಾಗಿ ಹಿಜಾಬ್‌ ಹೇರಿದರೆ; ನಾನು ಹಿಜಾಬ್‌ ವಿರುದ್ಧ...' ಎಂದು ಕಾಂಗ್ರೆಸ್‌ ಶಾಸಕಿ ತಮ್ಮ ನಿಲುವನ್ನು ತಿಳಿಸಿದ್ದಾರೆ.

'ಭಾರತದ ಮಗಳು' ಎಂದು ಉಲ್ಲೇಖಿಸಿ ವಿವಿಧ ಧರ್ಮಗಳ ಮಹಿಳೆಯರು ತಲೆಯನ್ನು ಮುಚ್ಚುವಂತಹ ವಸ್ತ್ರವನ್ನು ಧರಿಸಿರುವ ಚಿತ್ರವನ್ನು ಅಂಜಲಿ ನಿಂಬಾಳ್ಕರ್‌ ಹಂಚಿಕೊಂಡಿದ್ದಾರೆ. ಈ ಮೂಲಕ ಏನನ್ನು ತೊಡಬೇಕು ಅಥವಾ ಬೇಡ ಎಂಬುದು ಮಹಿಳೆಯರ ಸ್ವಾತಂತ್ರ್ಯ ಎಂಬುದನ್ನು ಸೂಚ್ಯವಾಗಿ ಅಂಜಲಿ ನಿಂಬಾಳ್ಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT