ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮದಲ್ಲಿ 34ನೇ ಶರಣ ಮೇಳಕ್ಕೆ ಚಾಲನೆ

‘ಶರಣರ ಚಿಂತನೆಗಳಿಗೆ ಸನಾತನ ಪದ ಪೂರಕವಲ್ಲ’
Last Updated 12 ಜನವರಿ 2021, 17:30 IST
ಅಕ್ಷರ ಗಾತ್ರ

ಕೂಡಲಸಂಗಮ: ‘ಶರಣರ ಚಿಂತನೆಗಳಿಗೆ ಸನಾತನ ಪದ ಪೂರಕವಲ್ಲ. ಬಸವ ಕಲ್ಯಾಣದಲ್ಲಿ ನಡೆದ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಚಾಲನಾ ಸಮಾರಂಭ ಕುರಿತು ಸರ್ಕಾರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಸನಾತನ ಪದ ಬಳಕೆ ಮಾಡಿರುವುದು ಸೂಕ್ತವಲ್ಲ’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರು ಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ಮಂಗಳವಾರ ಆರಂಭಗೊಂಡ ಮೂರು ದಿನಗಳ 34ನೇ ಶರಣ ಮೇಳದಲ್ಲಿ ರಾಷ್ಟ್ರೀಯ ಬಸವ ದಳದ 30ನೇ ಅಧಿವೇಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ವ್ಯಕ್ತಿಗಿಂತ ತತ್ವಕ್ಕೆ ಎಲ್ಲರೂ ಬದ್ಧರಾಗಿರಬೇಕು. ಬಸವತತ್ವದ ಮಠಾಧೀಶರು ಪ್ರಚಾರ, ಪ್ರತಿಷ್ಠೆ ಬಿಟ್ಟು ಲಿಂಗಾಯತ ಹೋರಾಟಕ್ಕೆ ಮುಂದೆ ಬರಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಬಸವ ಧರ್ಮ ಪೀಠದ
ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಎಲ್ಲ ಮಠಾಧೀಶರು ಕೈಜೋಡಿಸಬೇಕು’ ಎಂದು ಹೇಳಿದರು.

ಪ್ರಶಸ್ತಿ: ಬಾಗಲಕೋಟೆ ನಿವೃತ್ತ ಕೃಷಿ ಅಧಿಕಾರಿ ಶಿವಾನಂದ ನಾರಾ ಅವರಿಗೆ ಶರಣ ಕೃಷಿ ರತ್ನ, ಕಲಬುರ್ಗಿ ರಾಜಾಪೂರ ಶಾಖೆಯ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ವಿಜಯಕುಮಾರ್ ಮೇಳಕುಂದೆ ಅವರಿಗೆ ಶರಣ ದಾಸೋಹ ರತ್ನ, ಹುಬ್ಬಳ್ಳಿ ಲಿಂಗಾಯತ ಧರ್ಮ ಮಹಾಸಭಾ ಉಪಾಧ್ಯಕ್ಷ ಬಸವರಾಜ ಅಣಿ ಅವರಿಗೆ ಶರಣ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT