ಮೋಟಾರು ವಾಹನ ನಿರೀಕ್ಷಕರ ಆಯ್ಕೆಯಲ್ಲಿ ಅಕ್ರಮ ಆರೋಪ: ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಮೋಟಾರು ವಾಹನ ನಿರೀಕ್ಷಕರ ಆಯ್ಕೆಯಲ್ಲಿನ ಅಕ್ರಮದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಟ್ವೀಟ್ನಲ್ಲಿ ಹಂಚಿಕೊಂಡಿರುವ ಕೆಪಿಸಿಸಿ, ‘ಶೇ 40 ಸರ್ಕಾರದ ಹುದ್ದೆ ಮಾರಾಟ ಪರ್ವ ಮುಂದುವರೆದಿದೆ. ಪಿಎಸ್ಐ ಅಕ್ರಮದಂತೆ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್ಪೆಕ್ಟರ್ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ’ ಎಂದು ಹೇಳಿದೆ.
‘ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್ಇಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನು ಅರ್ಹರೆಂದು ಮುದ್ರೆ ಒತ್ತಿದ್ದೇಕೆ? ಇದರಲ್ಲೂ ಶೇ 40 ವಸೂಲಿ ನಡೆದಿರುವುದು ನಿಶ್ಚಿತ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮೋಟಾರು ವಾಹನ ನಿರೀಕ್ಷಕ (ಐಎಂವಿ– ಬ್ರೇಕ್ ಇನ್ಸ್ಪೆಕ್ಟರ್) ಹುದ್ದೆಗೆ ಕೆಪಿಎಸ್ಸಿ ಪ್ರಕಟಿಸಿರುವ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ 141 ಅಭ್ಯರ್ಥಿಗಳಲ್ಲಿ, ಈ ಹುದ್ದೆಗೆ ‘ಅನರ್ಹ’ರೆಂದು ಕೆಪಿಎಸ್ಸಿಯೇ ಗುರುತಿಸಿದ್ದ 107 ಅಭ್ಯರ್ಥಿಗಳ ಹೆಸರುಗಳಿರುವುದು ಸಂಶಯಕ್ಕೆ ಕಾರಣವಾಗಿದೆ.
ಅನರ್ಹರೆಂದು ಗುರುತಿಸಲಾಗಿದ್ದವರ ಪೈಕಿ ಕೆಲವರಿಗೆ ಸಾರಿಗೆ ಇಲಾಖೆಯೇ ‘ಅರ್ಹತೆ’ಯ ಪ್ರಮಾಣಪತ್ರ ನೀಡಲು ಮುಂದಾಗಿದೆ ಎಂದೂ ಆರೋಪಿಸಲಾಗಿದೆ.
40% ಸರ್ಕಾರದ ಹುದ್ದೆ ಮಾರಾಟ ಪರ್ವ ಮುಂದುವರೆದಿದೆ.
PSI ಅಕ್ರಮದಂತೆ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್ಪೆಕ್ಟರ್ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.ಭ್ರಷ್ಟಾಚಾರದ ಕೂಪವಾಗಿರುವ KPSCಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನು ಅರ್ಹರೆಂದು ಮುದ್ರೆ ಒತ್ತಿದ್ದೇಕೆ?
ಇದರಲ್ಲೂ 40% ವಸೂಲಿ ನಡೆದಿರುವುದು ನಿಶ್ಚಿತ. pic.twitter.com/wSQMppVZfW
— Karnataka Congress (@INCKarnataka) August 19, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.