ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಪು ಅನಂತಪದ್ಮನಾಭ: ‘ಹಿಂದೂ ಅಲ್ಲದ ವ್ಯಾಪಾರಿಗೆ ಗುತ್ತಿಗೆ ನೀಡದಿರಲು ನಿರ್ಧಾರ’

ಕುಡುಪು ಅನಂತಪದ್ಮನಾಭ ದೇವಸ್ಥಾನಕ್ಕೆ ಬಾಳೆಹಣ್ಣು ಪೂರೈಕೆ
Last Updated 26 ಜೂನ್ 2022, 19:31 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿಗೆ ಸಮೀಪದ ಕುಡುಪು ಶ್ರೀ ಅನಂತಪದ್ಮನಾಭದೇವಸ್ಥಾನಕ್ಕೆ ಬಾಳೆಹಣ್ಣು ಪೂರೈಸುವ ವಾರ್ಷಿಕ ಗುತ್ತಿಗೆಯನ್ನು ಅನ್ಯಧರ್ಮೀಯ ವ್ಯಾಪಾರಿಗಳಿಗೆ ನೀಡದಿರಲು ಆಡಳಿತ ಮಂಡಳಿಯು ಮುಂದಾಗಿದೆ.

2021–22ನೇ ಸಾಲಿನಲ್ಲಿ ದೇವಸ್ಥಾನಕ್ಕೆ ಬಾಳೆಹಣ್ಣು ಪೂರೈಸುವ ಗುತ್ತಿಗೆಯನ್ನು ಮುಸ್ಲಿಂ ವ್ಯಾಪಾರಿಗೆ ನೀಡಿದ್ದಕ್ಕೆ ಧಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದವು.

ಕೆಲವರು ದೇವಸ್ಥಾನದ ಕಚೇರಿ ಕರೆ ಮಾಡಿ ಸಿಬ್ಬಂದಿಗೂ ಕಿರಿಕಿರಿ ಉಂಟು ಮಾಡುತ್ತಿದ್ದರು. ಇದರಿಂದ ಬೇಸತ್ತ ದೇವಸ್ಥಾನದ ಆಡಳಿತ ಮಂಡಳಿ 2022–23ನೇ ಸಾಲಿಗೆ ‌ಬಾಳೆ ಹಣ್ಣು ಹಾಗೂ ಇತರ ಸಾಮಗ್ರಿ ಪೂರೈಕೆಯ ಗುತ್ತಿಗೆಯನ್ನು ಹಿಂದೂಗಳಲ್ಲದ ವ್ಯಾಪಾರಿಗಳಿಗೆ ನೀಡದಿರುವ ನಿರ್ಧಾರಕ್ಕೆ ಬಂದಿದೆ.

‘ದರಪಟ್ಟಿ ಆಹ್ವಾನಿಸಲು ನೀಡಿದ ಜಾಹೀರಾತಿನಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ. ಈ ಬಗ್ಗೆ ವ್ಯಾಪಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೇವೆ ಅಷ್ಟೇ’ ಎಂದು ದೇವಸ್ಥಾನದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT