ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರ ಕೆಡವಿತೇ ಪೆಗಾಸಸ್?

Last Updated 20 ಜುಲೈ 2021, 19:27 IST
ಅಕ್ಷರ ಗಾತ್ರ

ನವದೆಹಲಿ: ಎರಡು ವರ್ಷಗಳ ಹಿಂದೆ, ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿಸಲು ಪೆಗಾಸಸ್‌ ಗೂಢಚರ್ಯೆಯ ಕುತಂತ್ರಾಂಶ ಬಳಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆಗ ಉಪಮುಖ್ಯಮಂತ್ರಿಯಾಗಿದ್ದ ಜಿ.ಪರಮೇಶ್ವರ, ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಆಪ್ತರು ಹಾಗೂ ಎಚ್‌.ಡಿ.ದೇವೇಗೌಡ ಅವರ ಭದ್ರತೆಯ ಹೊಣೆ ಹೊತ್ತಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರನ್ನು ಗುರಿಯಾಗಿಸಿ ಕಣ್ಗಾವಲು ನಡೆದ ಅನುಮಾನ ವ್ಯಕ್ತವಾಗಿದೆ.

ಫ್ರಾನ್ಸ್‌ನ ಫಾರ್‌ಬಿಡನ್‌ ಸ್ಟೋರೀಸ್‌ ನಡೆಸಿದ ತನಿಖೆಯಿಂದ ಸಿಕ್ಕ ದತ್ತಾಂಶದ ಪ್ರಕಾರ, ಪೆಗಾಸಸ್‌ ಗೂಢಚರ್ಯೆಗಾಗಿ ಪಟ್ಟಿ ಮಾಡ
ಲಾದ ಫೋನ್‌ ನಂಬರ್‌ಗಳಲ್ಲಿ, ಇವರ ಫೋನ್‌ ನಂಬರ್‌ಗಳೂ ಇದ್ದವು.

ಮೈತ್ರಿ ಸರ್ಕಾರವು ಪತನವಾಗುವ ಕೆಲವೇ ದಿನಗಳ ಮುನ್ನ ಇವರ ಫೋನ್‌ಗಳ ಮೇಲೆ ಕಣ್ಗಾವಲು ಇಡಲಾಗಿತ್ತು ಎಂಬುದನ್ನು ‘ವಾಷಿಂಗ್ಟನ್‌ ಪೋಸ್ಟ್‌’, ‘ದಿ ಗಾರ್ಡಿಯನ್‌’ ಹಾಗೂ ‘ದಿ ವೈರ್‌’ ಮಂಗಳವಾರ ವರದಿ ಮಾಡಿವೆ.

ಕರ್ನಾಟಕದಲ್ಲಿ 2019ರಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆದ ಸಂದರ್ಭದಲ್ಲಿ, ಮೈತ್ರಿ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿ ದ್ದರು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿದ ವಿಶ್ವಾಸ ಮತಕ್ಕೆ ಸೋಲಾಗಿತ್ತು. ನಂತರ, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಸರ್ಕಾರ ಬೀಳಿಸುವುದಕ್ಕಾಗಿಯೇ ಮೈತ್ರಿ ಸರ್ಕಾರದ ಮುಖಂಡರು ಹಾಗೂ ಅವರ ಆಪ್ತರ ಮೇಲೆ ಕಣ್ಗಾವಲು ನಡೆಸಲಾಗಿತ್ತು ಎಂದು ವರದಿ ಹೇಳಿದೆ.

ಕಣ್ಗಾವಲಿಗೆ ಗುರಿಯಾದ, ಜಿ.ಪರಮೇಶ್ವರ ಅವರು ಬಳಸುತ್ತಿದ್ದರು ಎನ್ನಲಾದ ಫೋನ್‌ ಸಂಖ್ಯೆಯು ತಮ್ಮದೇ ಎಂಬುದನ್ನು ಅವರು
ದೃಢಪಡಿಸಿದ್ದಾರೆ. ಆದರೆ, ಆ ಸಂಖ್ಯೆಯನ್ನು ಕೆಲವು ತಿಂಗಳುಗಳಿಂದ ತಾವು ಬಳಕೆ ಮಾಡುತ್ತಿಲ್ಲ ಎಂದಿದ್ದಾರೆ.

ಸೋರಿಕೆಯಾಗಿರುವ ದತ್ತಾಂಶದ ಪ್ರಕಾರ, ಎರಡು ಫೋನ್ ಸಂಖ್ಯೆಗಳು ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್‌ ಅವರಿಗೆ ಸೇರಿವೆ. 2019ರಲ್ಲಿ ತಾವು ಆ ಫೋನ್‌ ಸಂಖ್ಯೆಗಳನ್ನು ಬಳಸುತ್ತಿದ್ದು ದಾಗಿ ಸತೀಶ್‌ ಕೂಡ ದೃಢಪಡಿಸಿದ್ದಾರೆ. ಆದರೆ, ಈ ಬಗ್ಗೆ ಬೇರೇನೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಸಿದ್ದರಾಮಯ್ಯ ಅವರು ಬಹಳ ವರ್ಷಗಳಿಂದ ಖಾಸಗಿ ಫೋನ್‌ ಬಳಸುತ್ತಿರಲಿಲ್ಲವಾದ್ದರಿಂದ, ಆಪ್ತ ಕಾರ್ಯದರ್ಶಿ ವೆಂಕಟೇಶ್‌ ಅವರ ಫೋನ್‌ ಸಂಖ್ಯೆಯನ್ನೇ ಗುರಿಯಾ ಗಿಸಲಾಗಿದೆ ಎಂದು ‘ದಿ ವೈರ್‌’ ವರದಿ ಮಾಡಿದೆ.

ಪ್ರಭಾವಿಗಳನ್ನು ಗುರಿಯಾಗಿಸಿ ಕಣ್ಗಾವಲು ಇಡಲಾದ ಫೋನ್‌ ನಂಬರ್‌ ಗಳ ಪೈಕಿ, ಎಚ್.ಡಿ. ದೇವೇಗೌಡ ಅವರ ಭದ್ರತಾ ಸಿಬ್ಬಂದಿಯಾಗಿದ್ದ ಮಂಜುನಾಥ ಮುದ್ದೇಗೌಡ ಅವರ ಫೋನ್‌ ನಂಬರ್‌ ಕೂಡ ಸೇರಿದೆ. ಫೋನ್‌ ನಂಬರ್‌ ಅನ್ನು ಮಂಜುನಾಥ್‌ ಕೂಡ ದೃಢಪಡಿಸಿದ್ದಾರೆ.

ಆದರೆ, ಕರ್ನಾಟಕದ ರಾಜಕಾರಣಿಗಳು ಹಾಗೂ ಅವರ ಆಪ್ತರ ಫೋನ್‌ಗಳ ಮೇಲೆ ಕಣ್ಗಾವಲು ನಡೆದಿತ್ತೇ ಅಥವಾ ಹ್ಯಾಕ್‌ ಮಾಡಲು ಪ್ರಯತ್ನಿಸಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ ಎಂದೂ ವರದಿ ಮಾಡಿರುವ ‘ದಿ ವೈರ್‌’, ‘ಆಗಿನ ಸಂದರ್ಭ, ನಡೆದ ರಾಜಕೀಯ ವಿದ್ಯಮಾನಗಳು ಹಾಗೂ ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿ ಹುನ್ನಾರ ನಡೆಸುತ್ತಿರುವುದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಮಾಡುತ್ತಿದ್ದ ಆರೋಪಗಳನ್ನು ಪರಿಗಣಿ ಸುವುದಾದರೆ ಕಣ್ಗಾವಲಿನ ಸಾಧ್ಯತೆ ಇದೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT