ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ಇಬ್ಬರು ಕೃಷಿ ಕಾರ್ಮಿಕರು, 33 ಜಾನುವಾರು ಸಾವು

Last Updated 17 ಮೇ 2022, 14:15 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಬಹುಪಾಲು ಕಡೆ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಸಿಡಿಲಿನ ಹೊಡೆತಕ್ಕೆ ರೈತ ಮಹಿಳೆ ಹಾಗೂ ಪುರುಷ ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಎರಡು ಎತ್ತು, ಒಂದು ಹಸು ಹಾಗೂ 30 ಮೇಕೆಗಳು ಸಾವನ್ನಪ್ಪಿವೆ.

ಕಲಬುರಗಿ ನಗರದಲ್ಲಿ ಬಿರುಗಾಳಿ, ಗುಡುಗು ಸಮೇತ ಧಾರಾಕಾರ ಮಳೆ ಸುರಿಯಿತು. ತಗ್ಗು ಪ್ರದೇಶದ 18ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಇಲ್ಲಿನ ಪಿಡಿಎ ಎಂಜಿನಿಯರಿಂಗ್‌ ಕಾಲೇಜ್‌ ಹಾಗೂ ಹಳೆ ಜೇವರ್ಗಿ ರಸ್ತೆಯ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಅರ್ಧ ತಾಸು ಸಂಚಾರ ಸ್ಥಗಿತಗೊಂಡಿತು.

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಖಟಕ್‌ಚಿಂಚೋಳಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ ನಂದಕುಮಾರ್‌ (49), ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿಹಾಳ ಭೀಮಣ್ಣ ಹಿರೇಕುರುಬರ (38) ಸಿಡಿಲಿನ ಹೊಡೆತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಅಂತಾವರಂ ಗ್ರಾಮದ ಎಲಿಯಾ (35) ಸಿಡಿಲಿನಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿ 6 ಮೇಕೆ, 11 ಕುರಿ, ಮಸ್ಕಿ ತಾಲ್ಲೂಕಿನ ನಿರಲೂಟಿ ಗ್ರಾಮದಲ್ಲಿ 10 ಮೇಕೆಗಳು, ಚಿಂಚೋಳಿ ತಾಲ್ಲೂಕಿನ ಅಣವಾರ ಗ್ರಾಮದಲ್ಲಿ ಮೂರು ಮೇಕೆಗಳು, ಅಫಜಲಪುರದಲ್ಲಿ ಒಂದು ಹಸು, ಕಮಲಾಪುರ ಹಾಗೂ ಯರಗೋಳ ಸಮೀಪ ಹೊಣಗೇರದಲ್ಲಿ ತಲಾ ಒಂದು ಎತ್ತು ಸಾವನ್ನಪ್ಪಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT