ಭಾನುವಾರ, ಸೆಪ್ಟೆಂಬರ್ 25, 2022
21 °C

ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಚಿಕ್ಕಪ್ಪನ ಬ್ಯಾಗ್‌ನಲ್ಲಿ ಜೀವಂತ ಗುಂಡುಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ಚಿಕ್ಕಪ್ಪ ಉಮರ್‌ ಫಾರೂಕ್‌ ಹ್ಯಾರಿಸ್‌ ನಲಪಾಡ್‌ ಅವರ ಬ್ಯಾಗ್‌ನಲ್ಲಿ ಬಂದೂಕಿನ ಜೀವಂತ ಗುಂಡುಗಳು ಪತ್ತೆಯಾಗಿವೆ. 

ಫಾರೂಕ್‌ ಅವರು ದುಬೈಗೆ ಹೋಗುವ ಸಲುವಾಗಿ ಮಂಗಳವಾರ ಬೆಳಿಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರ ಬಳಿ ಇದ್ದ ಕ್ಯಾಬಿನ್‌ ಲಗೇಜ್‌ ಪರಿಶೀಲನೆ ವೇಳೆ ಗುಂಡುಗಳು ಪತ್ತೆಯಾಗಿವೆ. ನಿಲ್ದಾಣದ ಸಿಬ್ಬಂದಿ ಈ ವಿಚಾರವನ್ನು ಸಿಐಎಸ್‌ಎಫ್‌ ಅಧಿಕಾರಿಗಳಿಗೆ ತಿಳಿಸಿದ್ದರು. ಅವರು ಫಾರೂಕ್‌ ಅವರನ್ನು ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದರು. 

‘ಬಟ್ಟೆಗಳನ್ನು ಬ್ಯಾಗ್‌ಗೆ ತುಂಬುವ ವೇಳೆ ಆಕಸ್ಮಿಕವಾಗಿ ಗುಂಡುಗಳು ಸೇರಿಕೊಂಡಿವೆ ಎಂದು ಫಾರೂಕ್‌ ತಿಳಿಸಿದ್ದಾರೆ. ತಮ್ಮ ಬಳಿ ಬಂದೂಕಿನ ಪರವಾನಗಿ ಇರುವ ವಿಚಾರವನ್ನೂ ಹೇಳಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ ಅವರು ಹೇಳಿರುವುದು ಸತ್ಯ ಎಂಬುದು ಮನದಟ್ಟಾಗಿದೆ. ಅವರಿಗೆ ದುಬೈಗೆ ಪ್ರಯಾಣ ಮಾಡಲು ಅನುಮತಿ ನೀಡಿ, ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು