ಸೋಮವಾರ, ಆಗಸ್ಟ್ 15, 2022
20 °C

ಸಚಿವ ಆಗಲು ಓಲೈಸುವುದಾಗಲ್ಲ: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಸಚಿವ ಆಗಬೇಕೆಂದರೆ ದೆಹಲಿಗೆ ಹೋಗಿ ಕೂರಬೇಕು, ಓಲೈಸಬೇಕು. ಅದೆಲ್ಲ ನನ್ನಿಂದ ಆಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಮಂತ್ರಿ ಆಗ್ತಾರೆ, ಹೇಗೆ ಆಗ್ತಾರೆ ಎಂಬ ಕಥೆಗಳೆಲ್ಲ ಗೊತ್ತು. ಸಚಿವ ಸ್ಥಾನಕ್ಕಾಗಿ ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮನೆ ಬಾಗಿಲಿಗೆ ಹೋಗಿಲ್ಲ.  ಯತ್ನಾಳ ಯಾವತ್ತೂ ಗುಡುಗುತ್ತಿರುತ್ತಾನೆ. ಸದ್ದಡಗಿಸುವುದು ಸಾಧ್ಯವಿಲ್ಲ. ಸಂಪುಟ ವಿಸ್ತರಣೆಯ ನಂತರ ನನ್ನ ವಿಚಾರಗಳನ್ನು ಹೇಳುತ್ತೇನೆ’ ಎಂದರು.

ಸಿದ್ದರಾಮಯ್ಯ ಕ್ರಾಸ್‌ ಬ್ರೀಡ್‌ ಹಿಂದೂ:

ಸಿದ್ದರಾಮಯ್ಯ ಒಳ್ಳೆಯ ನಾಯಕ ಆದರೆ, ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಪಾರ್ಟಿಗೆ ಸೇರಿ ಕ್ರಾಸ್‌ ಬ್ರೀಡ್‌ ಹಿಂದೂ ಆಗಿದ್ದಾರೆ ಎಂದು ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು