ಮಂಗಳವಾರ, ಆಗಸ್ಟ್ 16, 2022
27 °C

ಡ್ರಗ್ಸ್‌ ಕೂಡ ಭಯೋತ್ಪಾದನೆಯ ಭಾಗವಾಗಿದೆ: ಸಂಸದ ಪ್ರತಾಪ ಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಡ್ರಗ್ಸ್‌ ಕೂಡ ಭಯೋತ್ಪಾದನೆಯ ಒಂದು ಭಾಗ. ದೇಶ ನಾಶ ಮಾಡಲು ಬಾಂಬ್‌, ಕ್ಷಿಪಣಿಯೇ ಬೇಕಾಗಿಲ್ಲ. ಯುವಕರನ್ನು ಡ್ರಗ್‌ ವ್ಯಸನಿಗಳಾಗಿಸಿದರೆ ಸಾಕು. ಅವರ ಇಡೀ ತಲೆಮಾರು ಸರ್ವನಾಶವಾಗುತ್ತದೆ. ವಿರೋಧಿ ದೇಶಗಳು ಭಾರತದೊಳಗೆ ಡ್ರಗ್‌ ಸಾಗಿಸಿ ವಿತರಿಸುತ್ತಿವೆ‍’ ಎಂದು ಸಂಸದ ಪ್ರತಾಪ ಸಿಂಹ ಬುಧವಾರ ಇಲ್ಲಿ ಹೇಳಿದರು.

‘ಡ್ರಗ್‌ ದಂಧೆ ಕೇವಲ ಬಾಲಿವುಡ್‌, ಕನ್ನಡ ಸಿನಿಮಾ ಉದ್ಯಮಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲಾ ಕಡೆ ಹರಡಿದೆ. ಇದರ ವಿರುದ್ಧ ಹೋರಾಟ ಆರಂಭಿಸಿ ನಿರ್ಮೂಲನೆಗೆ ಪ್ರಯತ್ನಿಸಬೇಕು’ ಎಂದರು.

ಡ್ರಗ್ಸ್‌ ಮಾಫಿಯಾದ ಹಣವೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಯಿತು ಎಂಬ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ, ‘ಆಧಾರ ರಹಿತ ಮಾತು, ಆರೋಪಗಳಿಗೆ ಉತ್ತರ ಕೊಡಲ್ಲ. ಯಾವುದೇ ವಿಚಾರ ಮಾತನಾಡಿದರೂ ಸಾಕ್ಷ್ಯಾಧಾರ ಇರಬೇಕು. ಅವರ ವಾದವನ್ನು ಪುಷ್ಟೀಕರಿಸದಿದ್ದರೆ ವಿಚಾರಕ್ಕಿಂತ ಉಗುಳೇ ಹೆಚ್ಚಾಗುತ್ತದೆ. ಆ ಉಗುಳಿನ ಬಗ್ಗೆ ನಾನು ಮಾತನಾಡಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು