ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಅತ್ಯಾಚಾರ ಪ್ರಕರಣ: ಒಂದು ವಾರದಿಂದ ಆರೋಪಿಗಾಗಿ ನಿಲ್ಲದ ಶೋಧ

ಮೈಸೂರು ಅತ್ಯಾಚಾರ ಪ್ರಕರಣ: ಮತ್ತೊಬ್ಬ ಆರೋಪಿಗಾಗಿ ತಮಿಳುನಾಡಲ್ಲಿ ಪೊಲೀಸರ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಾಗಿ ಪೊಲೀಸರು ತಮಿಳುನಾಡಿನಲ್ಲಿ ನಿರಂತರ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: 

ತಾಳವಾಡಿ ಸಮೀಪದ ಗ್ರಾಮದಲ್ಲಿ ಅಡಗಿದ್ದ ಆತನನ್ನು ಹಿಡಿಯಲು ಸ್ಥಳಕ್ಕೆ ತೆರಳಿದಾಗ ಮನೆ ಖಾಲಿ ಮಾಡಿದ್ದ. ತಿರ್‌ಪುರ್‌ ಜಿಲ್ಲೆಯ ಗ್ರಾಮವೊಂದ ರಲ್ಲಿರುವ ಮಾಹಿತಿ ಆಧರಿಸಿ ಹೋದ ಪೊಲೀಸರಿಗೆ ಅಲ್ಲೂ ಖಾಲಿ ಮನೆಯೇ ಕಂಡುಬಂದಿದೆ.  ಆರೋಪಿಯು ತನ್ನ ಮೊಬೈಲ್‌ ಫೋನ್ ಬಂದ್‌ ಮಾಡಿಕೊಂಡು, ದಾರಿಹೋಕರ ಫೋನ್ ಬಳಸಿ ಸ್ನೇಹಿತರನ್ನು ಸಂಪರ್ಕಿಸುತ್ತಿರುವುದು ಪೊಲೀಸರನ್ನು ಮತ್ತಷ್ಟು ಪೇಚಿಗೆ ನೂಕಿದೆ. ಆತನ ಪತ್ತೆಗೆ ತಮಿಳುನಾಡು ಪೊಲೀಸರೂ ಕೈಜೋಡಿಸಿದ್ದು, 2 ತಂಡಗಳಲ್ಲಿ ಅವರೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಲವು ಸರಗಳ್ಳತನ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದಾನೆ ಎಂದು ತಂಡದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದನ್ನೂ ಓದಿ: 

‘ಹಗಲಿನಲ್ಲಿ ಮಾಹಿತಿ ಕಲೆ ಹಾಕುವುದು ಹಾಗೂ ರಾತ್ರಿ ಕಾರ್ಯಾ ಚರಣೆ ಕೆಲಸ ನಿರಂತರವಾಗಿ ಸಾಗಿದೆ’ ಎಂದು ಮತ್ತೊಬ್ಬ ಸಿಬ್ಬಂದಿ ತಿಳಿಸಿದರು.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು