ಮಂಗಳವಾರ, ಸೆಪ್ಟೆಂಬರ್ 21, 2021
29 °C

ಅ.7 ರಂದು ಮೈಸೂರು ದಸರಾ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಮಹೋತ್ಸವವು ಅ.7 ರಂದು ಬೆಳಿಗ್ಗೆ 8.15 ರಿಂದ 8.45 ರೊಳಗಿನ ಶುಭಮುಹೂರ್ತದಲ್ಲಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿದೆ.

‘ಅ.15 ರಂದು ವಿಜಯದಶಮಿ ದಿನ ಸಂಜೆ 4.36 ರಿಂದ 4.46ರ ಅವಧಿಯಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. 5.00 ರಿಂದ 5.30ರ ಒಳಗೆ ಜಂಬೂ ಸವಾರಿ ನಡೆಯಲಿದ್ದು, ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರಲಿದೆ. ಜಂಬೂ ಸವಾರಿಯಲ್ಲಿ ಎಂಟು ಆನೆಗಳು ಪಾಲ್ಗೊಳ್ಳಲಿವೆ. ನವರಾತ್ರಿಯ ಎಲ್ಲಾ ದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಬುಧವಾರ ದಸರಾ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ತಿಳಿಸಿದರು.

ಸೆ.16 ರಂದು ಗಜಪಡೆಗೆ ಸ್ವಾಗತ: ‘ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಸೆ.16 ರಂದು ಬೆಳಿಗ್ಗೆ 8.36ಕ್ಕೆ ಅರಮನೆಗೆ ಸ್ವಾಗತಿಸಲಾಗುವುದು. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸೆ.13 ರಂದು ಗಜಪಯಣ ಕಾರ್ಯಕ್ರಮ ಸರಳವಾಗಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಈ ಬಾರಿ 150 ರಸ್ತೆಮತ್ತು 77 ವೃತ್ತಗಳು ಸೇರಿದಂತೆ ಒಟ್ಟು 100 ಕಿ.ಮೀ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ. ಹಿಂದಿನ ವರ್ಷ 60 ಕಿಮೀ ದೀಪಾಲಂಕಾರ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು